ಭಾರತ-ಅಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ದುಕೊಂಡಿದೆ. ಆಸ್ಟ್ರೇಲಿಯಾ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಶಾನ್ ಮಾರ್ಷ್ ಹಾಗೂ ನೇಥನ್ ಲಯನ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 

ನಾಗ್ಪುರ[ಮಾ.05]: ಭಾರತ-ಅಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಆಯ್ದುಕೊಂಡಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವ ಭಾರತ, ಇಂದಿನ ಪಂದ್ಯದಲ್ಲೂ ಸಕಾರಾತ್ಮಕ ಫಲಿತಾಂಶದ ನಿರೀಕ್ಷೆಯಲ್ಲಿದೆ.

Scroll to load tweet…

ಆಸ್ಟ್ರೇಲಿಯಾ ತಂಡದಲ್ಲಿ 2 ಬದಲಾವಣೆ ಮಾಡಲಾಗಿದ್ದು, ಶಾನ್ ಮಾರ್ಷ್ ಹಾಗೂ ನೇಥನ್ ಲಯನ್ ತಂಡ ಕೂಡಿಕೊಂಡಿದ್ದಾರೆ. ಇನ್ನು ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 
ಇಲ್ಲಿನ ಜಮ್ತಾ ಮೈದಾನದಲ್ಲಿ ನಡೆಯಲಿರುವ ಪಂದ್ಯ ಭಾರತದ ಪಾಲಿಗೆ ಅದೃಷ್ಟದ ತಾಣವಾಗಿದ್ದು, ಇದುವರೆಗೂ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲೂ ಗೆಲುವಿನ ನಗೆ ಬೀರಿದೆ. ಇನ್ನು ಆಸ್ಟ್ರೇಲಿಯಾ ಈ ಮೈದಾನದಲ್ಲಿ ಒಮ್ಮೆ ಮಾತ್ರ ಗೆಲುವಿನ ರುಚಿ ಕಂಡಿದ್ದು, 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಎದುರು ಜಯಭೇರಿ ಬಾರಿಸಿತ್ತು.

ಇನ್ನು ಉತ್ತಮ ಫಾರ್ಮ್’ನಲ್ಲಿರುವ ಧೋನಿ ಪಾಲಿಗೆ ಇದು ನೆಚ್ಚಿನ ಮೈದಾನವಾಗಿದ್ದು, ಆಡಿದ 4 ಇನ್ನಿಂಗ್ಸ್’ಗಳಲ್ಲಿ 2 ಶತಕ ಸೇರಿದಂತೆ ಒಟ್ಟು 268 ರನ್ ಬಾರಿಸಿದ್ದಾರೆ. 2009ರಲ್ಲಿ ಧೋನಿ ಆಸ್ಟ್ರೇಲಿಯಾ ವಿರುದ್ಧವೇ ಶತಕ ಸಿಡಿಸಿದ್ದರು.

ತಂಡಗಳು ಹೀಗಿವೆ:

ಭಾರತ:

Scroll to load tweet…

ಆಸ್ಟ್ರೇಲಿಯಾ

Scroll to load tweet…