ದಕ್ಷಿಣ ಆಫ್ರಿಕಾ ವಿರುದ್ಧದ  ಕೇಪ್'ಟೌನ್'ನಲ್ಲಿ ನಡೆಯುತ್ತಿ–ರುವ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ 43ನೇ ಓವರ್ ವೇಳೆ ಕವರ್‌ನಲ್ಲಿ ಬ್ಯಾನ್‌ಕ್ರಾಫ್ಟ್ ಕ್ಷೇತ್ರರಕ್ಷಣೆ ಮಾಡುತ್ತಿದ್ದರು.

ಕೇಪ್‌ಟೌನ್: ದಕ್ಷಿಣಾ ಆಫ್ರಿಕಾದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್'ಮೆನ್ ಕ್ಯಾಮರಾನ್ ಬ್ಯಾನ್ ಕ್ರಾಫ್ಟ್ ಚಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಿವ್ ಸ್ಮಿತ್ ಅವರಿಗೆ ನಾಯಕತ್ವ ತ್ಯಜಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸೂಚಿಸಿದೆ.

ಆಸ್ಟ್ರೇಲಿಯಾದ ಮಾಜಿ ಆಟಗಾರರು ಹಾಗೂ ಪರಿಣಿತರು ಕೂಡ ಸ್ಮಿತ್ ಆರೋಪಕ್ಕೆ ಹೊಣೆಹೊತ್ತು ನಾಯಕತ್ವದಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿದ್ದಾರೆ. ಪ್ರಕರಣದ ವಿರುದ್ಧ ಮಂಡಳಿ ತನಿಖೆಗೆ ಮುಂದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್'ಟೌನ್'ನಲ್ಲಿ ನಡೆಯುತ್ತಿ–ರುವ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ 43ನೇ ಓವರ್ ವೇಳೆ ಕವರ್‌ನಲ್ಲಿ ಬ್ಯಾನ್‌ಕ್ರಾಫ್ಟ್ ಕ್ಷೇತ್ರರಕ್ಷಣೆ ಮಾಡುತ್ತಿದ್ದರು. ಈ ವೇಳೆ ಅವರ ಬಳಿ ಕೈಯಲ್ಲಿ ವಸ್ತು ಇರುವುದು ಕ್ಯಾಮರಗಳಿಂದ ಪತ್ತೆಯಾಯಿತು. ಈ ಕುರಿತು ಮಾಹಿತಿ ಪಡೆದ ಅಂಪೈರ್‌ಗಳು ಬ್ಯಾನ್‌ಕ್ರಾಫ್ಟ್‌ರನ್ನು ಪ್ರಶ್ನಿಸಿದರು.

ಈ ವೇಳೆ ಬ್ಯಾನ್‌ಕ್ರಾಫ್ಟ್ ಪ್ಯಾಂಟ್‌ನ ಒಳ ಜೇಬಿನಿಂದ ವಸ್ತುವೊಂದನ್ನು ತೆಗೆದು ಅಂಪೈರ್‌ಗಳಿಗೆ ತೋರಿಸಿದರು. ಹಳದಿ ಬಣ್ಣದ ಆ ವಸ್ತು, ಸನ್‌ಗ್ಲಾಸ್‌ಗಳನ್ನು ಇರಿಸುವ ನಯವಾದ ಚೀಲದಂತೆ ಇತ್ತು ಎಂದು ಅಂಪೈರ್‌ಗಳು ತಿಳಿಸಿದರು. ಬಳಿಕ ಬ್ಯಾನ್‌ಕ್ರಾಫ್ಟ್ ವಿರುದ್ಧ ಕ್ರಮಕ್ಕೆ ಮುಂದಾಗಲಿಲ್ಲ, ಅದೇ ಚೆಂಡಿನಲ್ಲಿ ಆಟ ಮುಂದುವರಿಸಿದರು. ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.