ದೆಹಲಿ(ಮಾ.13): ಆಸ್ಟ್ರೇಲಿಯಾ ವಿರುದ್ಧದ ಟಿ20  ಸರಣಿ ಸೋತು ಭಾರತ ಇದೀಗ ಏಕದಿನ ಸರಣಿಯನ್ನೂ ಕೈಚೆಲ್ಲಿದೆ. ದೆಹಲಿಯಲ್ಲಿ ನಡೆದ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 35 ರನ್ ಸೋಲು ಅನುಭವಿಸಿದೆ. ಆರಂಭಿಕ 2 ಪಂದ್ಯ ಸೋತು, ಬಳಿಕ 3 ಪಂದ್ಯ ಗೆದ್ದ ಆಸ್ಟ್ರೇಲಿಯಾ 3-2 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು.  ಈ ಮೂಲಕ 2009ರ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ತವರಿನಲ್ಲಿ ಆಸಿಸ್ ವಿರುದ್ಧ ಸರಣಿ ಸೋತ ಮುಖಭಂಗಕ್ಕೆ ಒಳಗಾಗಿದೆ. 

ಇದನ್ನೂ ಓದಿ: ಕೆ.ಎಲ್.ರಾಹುಲ್ ಪರ ಬ್ಯಾಟ್ ಬೀಸಿದ ಟ್ವಿಟರಿಗರು!

ನಿರ್ಣಾಯಕ ಪಂದ್ಯದಲ್ಲಿ 273 ರನ್ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ರೋಹಿತ್ ಶರ್ಮಾ ನಿಧಾನಗತಿಯಲ್ಲಿ ಬ್ಯಾಟ್ ಬೀಸಿದರೆ ಮತ್ತೊಂದೆಡೆಯಿಂದ ವಿಕೆಟ್ ಪತನ ಆರಂಭಗೊಂಡಿತು. ರೋಹಿತ್ 56 ರನ್ ಕಾಣಿಕೆ ನೀಡಿದರು.

ಶಿಖರ್ ಧವನ್ 12,  ವಿರಾಟ್ ಕೊಹ್ಲಿ 20, ರಿಷಬ್ ಪಂತ್ 16, ರವೀಂದ್ರ ಜಡೇಜಾ ಶೂನ್ಯ ಸುತ್ತಿದರು. ಆದರೆ ಕೇದಾರ್ ಜಾಧವ್ ಹಾಗೂ ಭುವನೇಶ್ವರ್ ಕುಮಾರ್ ಜೊತೆಯಾಟ ಗೆಲುವಿನ ಆಸೆ ಚಿಗುರಿಸಿತು. ಭುವನೇಶ್ವರ್ ಕುಮಾರ್ 46 ರನ್ ಸಿಡಿಸಿ ಔಟಾದರೆ, ಕೇದಾರ್ 44 ರನ್ ಸಿಡಿಸಿ ಪೆವಿಲಿಯನ್ ಸೇರಿದರು.

ಇದನ್ನೂ ಓದಿ: ಚುನಾವಣಾ ದಿನಾಂಕ ನಿಗದಿ ಬೆನ್ನಲ್ಲೇ ಸಚಿನ್, ಕೊಹ್ಲಿ ನೆರವು ಕೇಳಿದ ಮೋದಿ!

ಕೇದಾರ್ ಜಾಧವ್ ವಿಕೆಟ್ ಪತನವಾಗುತ್ತಿದ್ದಂತೆ ಭಾರತದ ಸೋಲು ಖಚಿತಗೊಂಡಿತು. ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾಗೆ ಅಸಾಧ್ಯ ಮೊತ್ತ ಚೇಸ್ ಮಾಡಲು ಸಾಧ್ಯವಾಗಲಿಲ್ಲ. ಭಾರತ ಅಂತಿಮ ಎಸೆತದಲ್ಲಿ ಕುಲ್ದೀಪ್ ಯಾದವ್ ವಿಕೆಟ್ ಪತನದೊಂದಿಗೆ  237 ರನ್ ಸಿಡಿಸಿ ಆಲೌಟ್ ಆಯ್ತು. ಈ ಮೂಲಕ ಆಸಿಸ್ 35 ರನ್ ಗೆಲುವು ಸಾಧಿಸಿತು. 

2019ರ ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ಮಹತ್ವದ ಸರಣಿಯಲ್ಲಿ ಭಾರತ ಮುಗ್ಗರಿಸಿದೆ. ಅಂತಿಮ 3 ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಬಂಡವಾಳ ಬಯಲಾಗಿದೆ. ಗೆಲುವಿನ ಅಲೆಯಲ್ಲಿದ್ದ ಕೊಹ್ಲಿ ಸೈನ್ಯಕ್ಕೆ ಶಾಕ್ ನೀಡೋ ಮೂಲಕ