ಮುಂಬೈ(ಸೆ.18): ಇಂಡಿಯನ್ ಪ್ರೀಮಿಯರ್ ಲೀಗ್ ಟಿವಿ ಪ್ರಸಾರ ಹಕ್ಕನ್ನು ಮಾರಲು ಬಿಸಿಸಿಐ ಮುಂದಾಗಿದೆ. ಹಾಗಾಗಿ ಈ ಸಲ ಬಿಡ್ಡಿಂಗ್ ಅನ್ನು ಪಾರದರ್ಶಕವಾಗಿ ನಡೆಸಲು ಬಿಸಿಸಿಐ ನಿರ್ಧರಿಸಿದೆ.
2018ರ ಐಪಿಎಲ್ ಟಿವಿ ಪ್ರಸಾರ ಹಕ್ಕನ್ನು ಮಾರಲು ಬಿಸಿಸಿಐ ಮುಂದಾಗಿದೆ. 2017ರಲ್ಲಿ ಸದ್ಯ ಪ್ರಸಾರ ಹಕ್ಕು ಪಡೆದಿರುವ ಕಂಪನಿಯ ಅವಧಿ ಮುಗಿಯಲಿದ್ದು ಬಿಸಿಸಿಐ ಈ ಹಿನ್ನಲೆ ಪ್ರಸಾರ ಹಕ್ಕನ್ನು ಮಾರಲು ಮುಂದಾಗಿದೆ.
ಹೆಚ್ಚು ಲಾಭದ ನಿರೀಕ್ಷೆಯಲ್ಲಿ ಬೋರ್ಡ್ ಇರುವುದಾಗಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಚಿನ್ನದ ಮೊಟ್ಟೆ ಇಡುವ ಐಪಿಎಲ್ ನಿಂದ ಈಗಾಗಲೇ ಬಿಸಿಸಿಐ ಸಾಕಷ್ಟು ಲಾಭಗಳಿದ್ದು, ಈ ಬಿಡ್ಡಿಂಗ್ ನಲ್ಲಿ ಇನ್ನು ಹೆಚ್ಚಿನ ಮೊತ್ತವನ್ನು ಪಡೆಯಲಿದೆ.
