ಅಸ್ಸಾಂ ಓಟಗಾರ್ತಿ ಹಿಮಾ ದಾಸ್ ಇದೀಗ ಭಾರತೀಯರ ನೆಚ್ಚಿನ ಕ್ರೀಡಾಪಟು. ಓಟದಲ್ಲಿ ಸಾಧನೆಯ ಶಿಖರವೇರಿದ ಹಿಮಾ ದಾಸ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭೇಟಿಯಾಗಿದ್ದಾರೆ. ಈ ವೇಳೆ ಸಚಿನ್ ವಿಶೇಷ ಉಡುಗೊರೆ ನೀಡಿದ್ದಾರೆ.

ಮುಂಬೈ(ಸೆ.28): ಭಾರತದ ಓಟಗಾರ್ತಿ ಹಿಮಾ ದಾಸ್ ಇದೀಗ ಚಿನ್ನದ ಹುಡುಗಿ ಎಂದೇ ಪ್ರಸಿದ್ಧಿ. ಇಂಡೋನೇಷಿಯಾ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿದ ಹಿಮಾ ದಾಸ್ ಅರ್ಜುನ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇದೀಗ ಹಿಮಾ ದಾಸ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಭೇಟಿಯಾಗಿದ್ದಾರೆ. 

ಅಸ್ಸಾಂನ ಪುಟ್ಟ ಹಳ್ಳಿಯಿಂದ ಬಂದು ಸಾಧನೆ ಶಿಖರವೇರಿದ ಹಿಮಾ ದಾಸ್, ತನ್ನ ದಿಗ್ಗಜ ಕ್ರೀಡಾಪಟು, ಸ್ಪೂರ್ತಿಯ ಚಿಲುಮೆ ಸಚಿನ್ ಭೇಟಿ ಮಾಡಿರುವುದ ಎಲ್ಲಿಲ್ಲ ಖುಷಿ ನೀಡಿದೆ ಎಂದಿದ್ದಾರೆ. ಈ ವೇಳೆ ಸಚಿನ್ ತೆಂಡುಲ್ಕರ್ ಸಹಿ ಮಾಡಿದ ಕ್ರಿಕೆಟ್ ಜರ್ಸಿ ಉಡುಗೊರೆಯಾಗಿ ನೀಡಿದ್ದಾರೆ.

Scroll to load tweet…

ಸಚಿನ್ ಜೊತೆಗಿನ ಭೇಟಿಯನ್ನ ಹಿಮಾ ದಾಸ್ ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಹಿಮಾ ದಾಸ್ ಸಾಧನೆ ಪರಿಗಣಿಸಿ ಅಸ್ಸಾಂ ಸರ್ಕಾರ ರಾಜ್ಯದ ಕ್ರೀಡಾ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ.

Scroll to load tweet…

ಇದನ್ನೂ ಓದಿ: ಆ್ಯಡಿಡಾಸ್ ಶೂ ಮೇಲೆ ಹಿಮಾದಾಸ್ ಹೆಸರು..!