ಬೆಳಗಾವಿ(ಸೆ.03): ‘ಏಷ್ಯಾಡ್‌ನಲ್ಲಿ ಪದಕ ಗೆದ್ದಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡುವ ಹಂಬಲವಿದ್ದು, 2020ರ
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ನನ್ನ ಗುರಿ’ ಎಂದು ಕುರಾಶ್ ಪಟು ಮಲಪ್ರಭಾ ಜಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಏಷ್ಯನ್ ಗೇಮ್ಸ್‌ನ ಕುರಾಶ್‌ನಲ್ಲಿ ಕಂಚು ಗೆದ್ದಿರುವ ಮಲಪ್ರಭಾ ಜಾಧವ್ ಅವರನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಕ್ರೀಡಾ ಹಾಗೂ ಯುವಜನ ಸೇವಾ ಇಲಾಖೆಗಳು ಭಾನುವಾರ ಗೌರವಿಸಿ ಸನ್ಮಾನಿಸಿದವು. ‘ಏಷ್ಯಾಡ್ ಪದಕದ ಶ್ರೇಯ ಸಂಪೂರ್ಣವಾಗಿ, ನನ್ನ ತಂದೆ-ತಾಯಿ, ತರಬೇತುದಾರ ಜಿತೇಂದ್ರ ಸಿಂಗ್ ಮತ್ತು ತ್ರಿವೇಣಿ ಅವರಿಗೆ ಸಲ್ಲುತ್ತದೆ.

ಜತೆಗೆ ಬೆಳಗಾವಿಯಲ್ಲಿ ಒಂದು ಜುಡೋ ಅಕಾಡೆಮಿ ಸ್ಥಾಪನೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು. ತರಬೇತುದಾರ ಜಿತೇಂದ್ರಸಿಂಗ್ ಮಾತನಾಡಿ, ‘ಬೆಳಗಾವಿಯಲ್ಲಿ ಜುಡೋ ಹಾಗೂ ಕುರಾಶ್ ಕ್ರೀಡೆ
ಅಭಿವೃದ್ಧಿಗೆ ಸೂಕ್ತ ಸೌಲಭ್ಯಗಳ ಅಗತ್ಯವಿದೆ. ಒಂದು ವೇಳೆ ಸೂಕ್ತ ಸೌಲಭ್ಯಗಳು ದೊರೆತರೆ ಮಲಪ್ರಭಾ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬಲ್ಲರು’ ಎಂದು ಹೇಳಿದರು.