18ನೇ ಏಷ್ಯನ್ ಗೇಮ್ಸ್’ನಲ್ಲಿ ಭಾರತ ಶೂಟಿಂಗ್ ಮೂಲಕ ಪದಕದ ಖಾತೆ ತೆರೆದಿದೆ. 10 ಮೀಟರ್ ಏರ್’ರೈಫಲ್ಸ್ ಮಿಶ್ರ ವಿಭಾಗದಲ್ಲಿ ಅಪೂರ್ವಿ ಚಾಂಡೀಲಾ- ರವಿಕುಮಾರ್ ಜೋಡಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಜಕಾರ್ತ[ಆ.19]: 18ನೇ ಏಷ್ಯನ್ ಗೇಮ್ಸ್’ನಲ್ಲಿ ಭಾರತ ಶೂಟಿಂಗ್ ಮೂಲಕ ಪದಕದ ಖಾತೆ ತೆರೆದಿದೆ. 10 ಮೀಟರ್ ಏರ್’ರೈಫಲ್ಸ್ ಮಿಶ್ರ ವಿಭಾಗದಲ್ಲಿ ಅಪೂರ್ವಿ ಚಾಂಡೀಲಾ- ರವಿಕುಮಾರ್ ಜೋಡಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೈನೀಶ್ ತೈಪೆ ತಂಡ 494.1 ಅಂಕಗಳೊಂದಿಗೆ ಚಿನ್ನ ಗೆದ್ದುಕೊಂಡರೆ, ಚೀನಾ ತಂಡ 492.5 ಅಂಕದೊಂದಿಗೆ ಬೆಳ್ಳಿ ಪದಕ ಜಯಿಸಿತು. ಇನ್ನು ಭಾರತದ ಜೋಡಿ ಅಪೂರ್ವ-ರವಿಕುಮಾರ್ ತಂಡ 429.9 ಅಂಕಗಳೊಂದಿಗೆ ಕಂಚಿನ ಪದಕ ಜಯಿಸಿತು.

ಇನ್ನು ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಪದಕದ ಭರವಸೆ ಮೂಡಿಸಿದ್ದ ಮುನು ಬಾಕರ್, ಅಭಿಷೇಕ್ ವರ್ಮಾ ಜೋಡಿ ಕ್ವಾಲಿಫೈಯರ್ ಹಂತದಲ್ಲೇ ಹೊರಬಿದ್ದು ಆಘಾತ ಮೂಡಿಸಿತು.