ಬೆಳ್ಳಿ ಗೆದ್ದ ರಾಮ್‌ಕುಮಾರ್‌ ರಾಮನಾಥನ್‌-ಸಾಕೇತ್‌ ಮೈನೇನಿ ಜೋಡಿ

ರಾಮ್‌ಕುಮಾರ್‌ ರಾಮನಾಥನ್‌-ಸಾಕೇತ್‌ ಮೈನೇನಿ ಜೋಡಿ 4-6, 4-6 ನೇರ ಸೆಟ್‌ಗಳಲ್ಲಿ ಚೈನೀಸ್ ತೈಪೆಯ ಯು ಹ್ಯುಯಿಸ್ ಮತ್ತು ಜೇಸನ್ ಜಂಗ್‌ ಎದುರು ಶರಣಾಯಿತು. ಈ ಮೂಲಕ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಟೆನಿಸ್‌ ಸ್ಪರ್ಧೆಯಲ್ಲಿ ಭಾರತ ಪದಕದ ಖಾತೆ ತೆರೆಯಿತು.

Asian Games 2023 Indian duo Saketh Ramanathan bow out with silver in mens doubles tennis final

ಹಾಂಗ್ಝೂ(ಸೆ.29): ಪುರುಷರ ಡಬಲ್ಸ್‌ನಲ್ಲಿ ರಾಮ್‌ಕುಮಾರ್‌ ರಾಮನಾಥನ್‌-ಸಾಕೇತ್‌ ಮೈನೇನಿ ಜೋಡಿ ಫೈನಲ್‌ನಲ್ಲಿ ಚೈನೀಸ್ ತೈಪೆ ಜೋಡಿಯ ಎದುರು ನೇರ ಸೆಟ್‌ಗಳಲ್ಲಿ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಇಂದು ಮುಂಜಾನೆ ನಡೆದ ಪಂದ್ಯದಲ್ಲಿ ಭಾರತದ ಟೆನಿಸ್ ಜೋಡಿ ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ರಾಮ್‌ಕುಮಾರ್‌ ರಾಮನಾಥನ್‌-ಸಾಕೇತ್‌ ಮೈನೇನಿ ಜೋಡಿ 4-6, 4-6 ನೇರ ಸೆಟ್‌ಗಳಲ್ಲಿ ಚೈನೀಸ್ ತೈಪೆಯ ಯು ಹ್ಯುಯಿಸ್ ಮತ್ತು ಜೇಸನ್ ಜಂಗ್‌ ಎದುರು ಶರಣಾಯಿತು. ಈ ಮೂಲಕ 19ನೇ ಏಷ್ಯನ್ ಗೇಮ್ಸ್‌ನಲ್ಲಿ ಟೆನಿಸ್‌ ಸ್ಪರ್ಧೆಯಲ್ಲಿ ಭಾರತ ಪದಕದ ಖಾತೆ ತೆರೆಯಿತು.

Asian Games 2023: ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

ಈ ಮೊದಲು ಸೆಮೀಸ್‌ನಲ್ಲಿ ರಾಮ್‌-ಸಾಕೇತ್‌, ಕೊರಿಯಾದ ಸಿಯೊಂಗ್‌ಚಾನ್‌-ಸೂನ್‌ವೂ ವಿರುದ್ಧ 6-1, 6-7(8), 10-0ಯಲ್ಲಿ ಜಯಿಸಿತು. ಮಿಶ್ರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಹಾಗೂ ಋತುಜಾ ಭೋಸಲೆ ಜೋಡಿ ಸೆಮಿಫೈನಲ್‌ಗೇರಿದ್ದು, ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದೆ. ಬೋಪಣ್ಣ-ಋತುಜಾ ಕ್ವಾರ್ಟರ್‌ನಲ್ಲಿ ಕಜಕಸ್ತಾನದ ಝಿಬೆಕ್‌ ಹಾಗೂ ಗ್ರಿಗೊರೈ ಜೋಡಿ ವಿರುದ್ಧ 7-5, 6-3ರಲ್ಲಿ ಜಯಿಸಿತು.

ಬಾಕ್ಸಿಂಗ್‌: ನಿಶಾಂತ್‌, ಜಾಸ್ಮಿನ್‌ ಕ್ವಾರ್ಟರ್‌ಗೆ

ಭಾರತೀಯ ಬಾಕ್ಸರ್‌ಗಳಾದ ನಿಶಾಂತ್‌ ದೇವ್‌ ಹಾಗೂ ಜಾಸ್ಮಿನ್‌ ಲಂಬೋರಿಯಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು, ವಿಶ್ವ ಚಾಂಪಿಯನ್‌ಶಿಪ್‌ ಕಂಚು ವಿಜೇತ ದೀಪಕ್‌ ಭೋರಿಯಾ ಪ್ರಿ ಕ್ವಾರ್ಟರ್‌ನಲ್ಲಿ ಸೋತು ನಿರಾಸೆ ಅನುಭವಿಸಿದರು. ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಜಾಸ್ಮಿನ್ ಸೌದಿ ಅರೇಬಿಯಾದ ಹದೀಲ್ ಗಜ್ವಾನ್‌ ವಿರುದ್ಧ ಗೆದ್ದರು. ಇನ್ನೊಂದು ಗೆಲುವು ಜಾಸ್ಮಿನ್‌ಗೆ ಕಂಚು, 2024ರ ಒಲಿಂಪಿಕ್ಸ್‌ ಕೋಟಾವನ್ನು ಖಚಿತಪಡಿಸಲಿದೆ. ಇನ್ನು ಪುರುಷರ 71 ಕೆ.ಜಿ. ವಿಭಾಗದಲ್ಲಿ ನಿಶಾಂತ್‌, ವಿಯಾಟ್ನಂನ ಬುಯಿ ಟುಂಗ್‌ ವಿರುದ್ಧ ಜಯಿಸಿದರು. ನಿಶಾಂತ್‌ ಫೈನಲ್‌ಗೇರಿದರೆ ಒಲಿಂಪಿಕ್ಸ್‌ಗೆ ಅರ್ಹತೆ ಸಿಗಲಿದೆ. ಪುರುಷರ 51 ಕೆ.ಜಿ. ವಿಭಾಗದಲ್ಲಿ ದೀಪಕ್‌ ಜಪಾನ್‌ನ ತೊಮೊಯಾ ವಿರುದ್ಧ ಸೋಲುಂಡರು.

'ರೋಹಿತ್‌ ಶರ್ಮ ತರ ಇರ್ಬೇಕು..' ವಿಶ್ವಕಪ್‌ಗೂ ಮುನ್ನ ಶುರುವಾಯ್ತು ಬಾಂಗ್ಲಾ ಟೀಮ್‌ನಲ್ಲಿ ಕಿತ್ತಾಟ!

ಇತರೆ ಫಲಿತಾಂಶಗಳು ಹೀಗಿವೆ:

ಫುಟ್ಬಾಲ್‌: ಪ್ರಿ ಕ್ವಾರ್ಟರ್‌ನಲ್ಲಿ ಪುರುಷರ ತಂಡಕ್ಕೆ ಸೌದಿ ಅರೇಬಿಯಾ ವಿರುದ್ಧ 0-2 ಗೋಲುಗಳ ಸೋಲು.

ಸೈಕ್ಲಿಂಗ್‌: ಪುರುಷರ ವೈಯಕ್ತಿಕ ಸ್ಪ್ರಿಂಟ್ ಕ್ವಾರ್ಟರ್‌ ಫೈನಲ್‌ನಲ್ಲಿ ಡೇವಿಡ್‌ ಬೆಕ್‌ಹ್ಯಾಮ್‌ಗೆ ಜಪಾನ್‌ನ ಒಟಾ ವಿರುದ್ಧ 2.395 ಸೆಕೆಂಡ್‌ಗಳಲ್ಲಿ ಸೋಲು.

ಜಿಮ್ನಾಸ್ಟಿಕ್ಸ್‌: ಮಹಿಳೆಯರ ವಾಲ್ಟ್‌ ವಿಭಾಗದ ಫೈನಲ್‌ನಲ್ಲಿ ಪ್ರಣತಿ ನಾಯ್ಕ್‌ಗೆ 8ನೇ ಸ್ಥಾನ.

ಟೇಬಲ್‌ ಟೆನಿಸ್‌: ಪುರುಷರ ಸಿಂಗಲ್ಸ್‌ನಲ್ಲಿ ಜಿ.ಸತ್ಯನ್‌, ಶರತ್‌ ಕಮಲ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶ. ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ಗೇರಿದ ಮನಿಕಾ ಬಾತ್ರಾ, ಶ್ರೀಜಾ ಅಕುಲಾಗೆ ಪ್ರಿ ಕ್ವಾರ್ಟರ್‌ನಲ್ಲಿ ಸೋಲು. ಮಿಶ್ರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ಗೆ ಜಿ.ಸತ್ಯನ್‌-ಮನಿಕಾ ಬಾತ್ರಾ ಜೋಡಿ.

ಈಜು: ಪುರುಷರ 800 ಮೀ. ಫ್ರೀ ಸ್ಟೈಲ್‌ ವಿಭಾಗದ ಫೈನಲ್‌ನಲ್ಲಿ ಆರ್ಯನ್‌ ನೆಹ್ರಾಗೆ 7ನೇ, ಕುಶಾಗ್ರ ರಾವತ್‌ಗೆ 8ನೇ ಸ್ಥಾನ. ಪುರುಷರ 4X100 ಮೀ. ಫ್ರೀಸ್ಟೈಲ್‌ ರಿಲೇ ವಿಭಾಗದಲ್ಲಿ ಭಾರತಕ್ಕೆ 6ನೇ ಸ್ಥಾನ, ಮಹಿಳೆಯರ 4X200 ಫ್ರೀ ಸ್ಟೈಲ್‌ ರಿಲೇ ವಿಭಾಗದಲ್ಲಿ ಭಾರತಕ್ಕೆ 8ನೇ ಸ್ಥಾನ.

ಹಾಕಿ: ಭಾರತಕ್ಕೆ 4-2 ಜಯ

ಚಿನ್ನ ಗೆಲ್ಲುವ ಮೂಲಕ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿರುವ ಭಾರತ ಪುರುಷರ ಹಾಕಿ ತಂಡ ಹ್ಯಾಟ್ರಿಕ್‌ ಜಯ ಸಾಧಿಸಿದೆ. ಗುರುವಾರ ‘ಎ’ ಗುಂಪಿನ ತನ್ನ 3ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಜಪಾನ್‌ ವಿರುದ್ಧ 4-2 ಗೋಲುಗಳ ಜಯ ಸಾಧಿಸಿತು. ತಂಡ 9 ಅಂಕ, +33 ಗೋಲು ವ್ಯತ್ಯಾಸದೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಸೆಮೀಸ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆವ ತಂಡಗಳು ಸೆಮೀಸ್‌ಗೇರಲಿವೆ. ಭಾರತಕ್ಕೆ ಗುಂಪು ಹಂತದಲ್ಲಿ ಇನ್ನೆರಡು ಪಂದ್ಯ ಬಾಕಿ ಇದ್ದು, ಸೆ.30ರಂದು ಪಾಕಿಸ್ತಾನ, ಅ.2ರಂದು
 ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.
 

Latest Videos
Follow Us:
Download App:
  • android
  • ios