ಏಷ್ಯಾಡ್‌ನಲ್ಲಿ ಭಾರತ ಐತಿಹಾಸಿಕ ಶತಕಪದಕೋತ್ಸವ..!

ಭಾರತ ಈ ಬಾರಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದು, 1962ರ ಬಳಿಕ ಶ್ರೇಷ್ಠ ಸಾಧನೆ ಎನಿಸಿಕೊಂಡಿತು. ನವದೆಹಲಿಯಲ್ಲಿ ನಡೆದಿದ್ದ 1951ರ ಚೊಚ್ಚಲ ಆವೃತ್ತಿ ಕ್ರೀಡಾಕೂಟದಲ್ಲಿ 2ನೇ ಸ್ಥಾನ ಪಡೆದಿದ್ದ ಭಾರತ, 1962ರ ಗೇಮ್ಸ್‌ನಲ್ಲಿ 3ನೇ ಸ್ಥಾನ ಗಳಿಸಿತ್ತು. ಆ ಬಳಿಕ ಈವರೆಗೆ ಭಾರತ 5ಕ್ಕಿಂತ ಮೇಲಿನ ಸ್ಥಾನಕ್ಕೇರಲು ಸಾಧ್ಯವಾಗಿರಲಿಲ್ಲ.

Asian Games 2023 India finishes with 107 medals 28 of them gold kvn

ಹಾಂಗ್‌ಝೋ(ಅ.08): ‘ಅಬ್‌ ಕೀ ಬಾರ್‌ 100 ಪಾರ್‌’ (ಈ ಬಾರಿ 100ರ ಗಡಿಯಾಚೆ) ಘೋಷವಾಕ್ಯದೊಂದಿಗೆ ಏಷ್ಯನ್ ಗೇಮ್ಸ್ ಕಣಕ್ಕಿಳಿದ ಭಾರತ ಇದೀಗ ಯಶಸ್ವಿಯಾಗಿ ತನ್ನ ಗುರಿ ಈಡೇರಿಸಿಕೊಂಡಿದೆ. ಅಲ್ಲದೆ, 19 ಆವೃತ್ತಿಗಳಲ್ಲಿ ಇದೇ ಮೊದಲ ಬಾರಿಗೆ 100ಕ್ಕೂ ಹೆಚ್ಚು ಪದಕ ಗಳಿಸಿ ಇತಿಹಾಸ ನಿರ್ಮಿಸಿದೆ. 28 ಚಿನ್ನ, 38 ಬೆಳ್ಳಿ, 41 ಕಂಚಿನೊಂದಿಗೆ 107 ಪದಕ ಗಳಿಸಿ ಭಾರತ ಈ ಬಾರಿಯ ಏಷ್ಯಾಡ್‌ನಲ್ಲಿ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ. 2018ರಲ್ಲಿ 70 ಪದಕ ಗಳಿಸಿದ್ದೇ ಭಾರತದ ಈವರೆಗಿನ ಗರಿಷ್ಠ ಸಾಧನೆ ಆಗಿತ್ತು. ಇದೀಗ ಆ ದಾಖಲೆಯನ್ನು ಮುರಿದದ್ದೇ ಅಲ್ಲದೆ, 100ರ ಗಡಿ ದಾಟುವ ಮೂಲಕ ಶತಪದಕೋತ್ಸವವನ್ನು ಆಚರಿಸಿದೆ.

2018ರಲ್ಲಿ 70 ಪದಕ ಗೆದ್ದಿದ್ದ ಭಾರತ, ಅದಕ್ಕೂ ಮೊದಲು 2010ರಲ್ಲಿ 65 ಪದಕ ಜಯಿಸಿತ್ತು. ಇದೇ ಮೊದಲ ಬಾರಿಗೆ 20ಕ್ಕಿಂತ ಹೆಚ್ಚಿನ ಚಿನ್ನದ ಪದಕ ಗೆದ್ದ ಭಾರತೀಯರು, ಮೊದಲ ಸಲ 25ಕ್ಕಿಂತ ಹೆಚ್ಚು ಬೆಳ್ಳಿ, 40ಕ್ಕಿಂತ ಹೆಚ್ಚು ಕಂಚಿನ ಪದಕಗಳನ್ನೂ ಗೆದ್ದು 2024ರ ಒಲಿಂಪಿಕ್ಸ್‌ಗೂ ಮುನ್ನ ಭರವಸೆ ಹೆಚ್ಚಿಸಿದ್ದಾರೆ.

World Cup 2023: ದಕ್ಷಿಣ ಆಫ್ರಿಕಾ ತಂಡಕ್ಕೆ 102 ರನ್‌ಗಳ ಭರ್ಜರಿ ಗೆಲುವು

ಕೊನೆ ದಿನ ಭರ್ಜರಿ ಬೇಟೆ: ಕ್ರೀಡಾಕೂಟಕ್ಕೆ ಭಾನುವಾರ (ಅ.8) ಅಧಿಕೃತವಾಗಿ ತೆರೆ ಬೀಳಲಿದೆಯಾದರೂ, ಭಾರತದ ಸ್ಪರ್ಧೆಗಳು ಶನಿವಾರವೇ ಕೊನೆಗೊಂಡವು. ಕೊನೆಯ ದಿನ ಭಾರತದಿಂದ ಭರ್ಜರಿ ಪದಕ ಬೇಟೆ ನಡೆಯಿತು. ಪುರುಷ ಹಾಗೂ ಮಹಿಳಾ ಕಬಡ್ಡಿ ತಂಡಗಳು ರೋಚಕ ಫೈನಲ್‌ಗಳಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿ ಚಿನ್ನಕ್ಕೆ ಮುತ್ತಿಟ್ಟರೆ, ಚೊಚ್ಚಲ ಬಾರಿಗೆ ಕಣಕ್ಕಿಳಿದ ಪುರುಷರ ಕ್ರಿಕೆಟ್‌ ತಂಡ ನಿರೀಕ್ಷೆಯಂತೆ ಬಂಗಾರ ಬಾಚಿತು.

ಆರ್ಚರಿಯಲ್ಲಿ ಭಾರತೀಯರ ಪರಾಕ್ರಮಕ್ಕೆ ಸಾಟಿಯೇ ಇರಲಿಲ್ಲ. ಸಾತ್ವಿಕ್‌ ಸಾಯಿರಾಜ್‌-ಚಿರಾಗ್ ಶೆಟ್ಟಿ ದೇಶಕ್ಕೆ ಬ್ಯಾಡ್ಮಿಂಟನ್‌ನಲ್ಲಿ ಚೊಚ್ಚಲ ಚಿನ್ನ ಗೆದ್ದುಕೊಟ್ಟರು. ಚೆಸ್‌ ತಂಡಗಳು ಬೆಳ್ಳಿ ಗೆಲ್ಲುವಲ್ಲಿ ಸಫಲವಾದರೆ, ಕುಸ್ತಿಯಲ್ಲಿ ದೀಪಕ್‌ ಪೂನಿಯಾ ಬೆಳ್ಳಿಗೆ ತೃಪ್ತಿಪಟ್ಟರು. ಚಿನ್ನ ಕೈತಪ್ಪಿದ್ದಕ್ಕೆ ಕಣ್ಣೀರಿಟ್ಟಿದ್ದ ಮಹಿಳಾ ಹಾಕಿ ತಂಡ, ಕಂಚು ಕೊರಳಿಗೇರಿಸಿಕೊಂಡು ತವರಿಗೆ ವಾಪಸಾಗಲಿದೆ.

World Cup 2023: ಲಂಕಾ ಎದುರು ವಿಶ್ವಕಪ್‌ನಲ್ಲಿ ವಿಶ್ವದಾಖಲೆ ಬರೆದ ದಕ್ಷಿಣ ಆಫ್ರಿಕಾ..!

4ನೇ ಸ್ಥಾನ: ಭಾರತ ಈ ಬಾರಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದು, 1962ರ ಬಳಿಕ ಶ್ರೇಷ್ಠ ಸಾಧನೆ ಎನಿಸಿಕೊಂಡಿತು. ನವದೆಹಲಿಯಲ್ಲಿ ನಡೆದಿದ್ದ 1951ರ ಚೊಚ್ಚಲ ಆವೃತ್ತಿ ಕ್ರೀಡಾಕೂಟದಲ್ಲಿ 2ನೇ ಸ್ಥಾನ ಪಡೆದಿದ್ದ ಭಾರತ, 1962ರ ಗೇಮ್ಸ್‌ನಲ್ಲಿ 3ನೇ ಸ್ಥಾನ ಗಳಿಸಿತ್ತು. ಆ ಬಳಿಕ ಈವರೆಗೆ ಭಾರತ 5ಕ್ಕಿಂತ ಮೇಲಿನ ಸ್ಥಾನಕ್ಕೇರಲು ಸಾಧ್ಯವಾಗಿರಲಿಲ್ಲ. 2010ರಲ್ಲಿ 6ನೇ, 2014 ಹಾಗೂ 2018ರಲ್ಲಿ 8ನೇ ಸ್ಥಾನ ಗಿಟ್ಟಿಸಿಕೊಂಡಿತ್ತು. ಇನ್ನು, ಈ ಬಾರಿಯೂ ಪದಕ ಪಟ್ಟಿಯಲ್ಲಿ ಚೀನಾ ಪಾರುಪತ್ಯ ಸಾಧಿಸಿದ್ದು, ಬರೋಬ್ಬರಿ 375+ ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಜಪಾನ್‌ ಹಾಗೂ ದ.ಕೊರಿಯಾ ತಂಡಗಳು ಕ್ರಮವಾಗಿ ನಂತರದ 2 ಸ್ಥಾನಗಳಲ್ಲಿವೆ.

ಕಬಡ್ಡಿಯಲ್ಲಿ ಪುರುಷ, ವನಿತಾ ತಂಡಕ್ಕೆ ಚಿನ್ನ

ಕಬಡ್ಡಿಯಲ್ಲಿ ಪಾರಮ್ಯ ಮುಂದುವರಿಸಿರುವ ಭಾರತದ ಪುರುಷ, ಮಹಿಳಾ ತಂಡಗಳೆರಡೂ ಚಿನ್ನ ಗೆದ್ದಿವೆ. ರೆಫ್ರಿಗಳ ಎಡವಟ್ಟಿನಿಂದಾಗಿ ಪುರುಷರ ತಂಡ ಇರಾನನ್ನು ಮಣಿಸಿ ಬಂಗಾರ ಸೂರೆ ಹೊಡೆದರೆ, ಮಹಿಳಾ ತಂಡ ಚೈನೀಸ್ ತೈಪೆಯನ್ನು ಮಣಿಸಿ ಚಿನ್ನ ಗೆದ್ದಿತು.

ಕ್ರಿಕೆಟ್‌ನಲ್ಲಿ ಪುರುಷರ ತಂಡಕ್ಕೆ ಚೊಚ್ಚಲ ಚಿನ್ನ

ಇದೇ ಮೊದಲ ಬಾರಿಗೆ ಏಷ್ಯನ್ ಗೇಮ್ಸ್‌ನ ಕ್ರಿಕೆಟ್‌ ಸ್ಪರ್ಧೆಯಲ್ಲಿ ಪಾಲ್ಗೊಂಡ ಭಾರತೀಯ ಪುರುಷರ ತಂಡ ಚೊಚ್ಚಲ ಪ್ರಯತ್ನದಲ್ಲೇ ಚಿನ್ನ ಗೆದ್ದು ಬೀಗಿದೆ. ಮೊನ್ನೆಯಷ್ಟೇ ಭಾರತದ ವನಿತೆಯರ ತಂಡವೂ ಮೊದಲ ಪ್ರಯತ್ನದಲ್ಲೇ ಚಿನ್ನ ಗೆದ್ದ ಸಾಧನೆ ಮಾಡಿತ್ತು.

ಬ್ಯಾಡ್ಮಿಂಟನ್‌ನಲ್ಲೂ ಐತಿಹಾಸಿಕ ಚಿನ್ನ

ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಭಾರತದ ತಾರಾ ಡಬಲ್ಸ್ ಜೋಡಿ, ವಿಶ್ವ ನಂ.1 ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಏಷ್ಯಾಡ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನ ತಂದಿದ್ದಾರೆ.

ಇಂದು ಸಮಾರೋಪ

19ನೇ ಏಷ್ಯನ್‌ ಗೇಮ್ಸ್‌ಗೆ ಭಾನುವಾರ ತೆರೆ ಬೀಳಲಿದೆ. ಆರ್ಟಿಸ್ಟಿಕ್‌ ಈಜು, ಕರಾಟೆ ಸ್ಪರ್ಧೆಗಳಷ್ಟೇ ನಡೆಯಲಿದ್ದು ಸಂಜೆ ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದೆ. ಆಕರ್ಷಕ ಉದ್ಘಾಟನಾ ಸಮಾರಂಭದೊಂದಿಗೆ ಗಮನ ಸೆಳೆದಿದ್ದ ಚೀನಾ ಮತ್ತೊಮ್ಮೆ ತನ್ನ ಕಲೆ, ತಂತ್ರಜ್ಞಾನದ ಸೊಬಗನ್ನು ಪ್ರದರ್ಶಿಸಲು ಕಾಯುತ್ತಿದೆ. ಸಂಜೆ 5.30ಕ್ಕೆ (ಭಾರತೀಯ ಕಾಲಮಾನ) ಸಮಾರೋಪ ಸಮಾರಂಭ ಆರಂಭಗೊಳ್ಳಲಿದೆ.
 

Latest Videos
Follow Us:
Download App:
  • android
  • ios