ಏಷ್ಯನ್ ಗೇಮ್ಸ್ 2018: ರಿಲೆಯಲ್ಲಿ ವನಿತೆಯರಿಗೆ ಬಂಗಾರ, ಪುರುಷರಿಗೆ ಬೆಳ್ಳಿ..!
ಕೇವಲ 3:28.72 ನಿಮಿಷಗಳಲ್ಲಿ ಗುರಿಮುಟ್ಟಿದ ವನಿತೆಯರ ತಂಡ ಚಿನ್ನದ ಪದಕ ಗೆದ್ದುಕೊಂಡಿತು. ಈ ಮೂಲಕ ಏಷ್ಯನ್ ಗೇಮ್ಸ್’ನಲ್ಲಿ ಭಾರತೀಯ ವನಿತೆಯರ ರಿಲೇ ತಂಡ ಸತತ 5ನೇ ಬಾರಿಗೆ ಚಿನ್ನದ ಪದಕ ಗೆದ್ದು ಇತಿಹಾಸ ಬರೆಯಿತು. 2002, 2006, 2010, 2014ರಲ್ಲೂ ಭಾರತ ವನಿತೆಯರ ರಿಲೇ ತಂಡ ಪದಕ ಜಯಿಸಿದೆ.
ಜಕಾರ್ತ[ಆ.30]: ಏಷ್ಯನ್ ಗೇಮ್ಸ್’ನಲ್ಲಿ ಭಾರತೀಯ ಅಥ್ಲೀಟ್ಸ್’ಗಳ ಪ್ರಾಬಲ್ಯ ಮುಂದುವರೆದಿದ್ದು, ವನಿತೆಯರ 4*400 ಮೀಟರ್ ರಿಲೆಯಲ್ಲಿ ಹಿಮಾ ದಾಸ್, ಪೂವಮ್ಮ, ಸರಿತಾಬೆನ್ ಗಾಯಕ್ವಾಡ್ ಹಾಗೂ ವಿಸ್ಮಯ ವೆಲ್ಲುವ ಜೋಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಇನ್ನು ಪುರುಷರ ರಿಲೇ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.
ಕೇವಲ 3:28.72 ನಿಮಿಷಗಳಲ್ಲಿ ಗುರಿಮುಟ್ಟಿದ ವನಿತೆಯರ ತಂಡ ಚಿನ್ನದ ಪದಕ ಗೆದ್ದುಕೊಂಡಿತು. ಈ ಮೂಲಕ ಏಷ್ಯನ್ ಗೇಮ್ಸ್’ನಲ್ಲಿ ಭಾರತೀಯ ವನಿತೆಯರ ರಿಲೇ ತಂಡ ಸತತ 5ನೇ ಬಾರಿಗೆ ಚಿನ್ನದ ಪದಕ ಗೆದ್ದು ಇತಿಹಾಸ ಬರೆಯಿತು. 2002, 2006, 2010, 2014ರಲ್ಲೂ ಭಾರತ ವನಿತೆಯರ ರಿಲೇ ತಂಡ ಪದಕ ಜಯಿಸಿದೆ.
ಇನ್ನು ಭಾರತದ ಪುರುಷರ ತಂಡ 3:01.85 ನಿಮಿಷಗಳಲ್ಲಿ ಗುರಿ ಮುಟ್ಟುವ ಮೂಲಕ ರಜತ ಪದಕಕ್ಕೆ ಕೊರಳೊಡ್ಡಿತು. ಮೊಹಮ್ಮದ್ ಪುತನ್’ಪುರಕಲ್, ಅಯ್ಯಸ್ವಾಮಿ, ಅನಾಸ್, ಅರೋಕಿಯಾ ರಾಜೀವ್ ಒಳಗೊಂಡ ತಂಡ ಬೆಳ್ಳಿ ಪದಕ ಜಯಿಸಿತು.