ಏಷ್ಯನ್ ಗೇಮ್ಸ್ ಕಬಡ್ಡಿ: ರಾಜ್ಯದ ಉಷಾ ಆಯ್ಕೆ

Asian Games 2018: Usha Rani Only One Karntaka Player is in women's Indian team
Highlights

ಏಷ್ಯನ್ ಗೇಮ್ಸ್‌ಗೆ ಆಯ್ಕೆ ಯಾದ ರಾಜ್ಯದ ಏಕೈಕ ಮಹಿಳಾ ಆಟಗಾರ್ತಿ ಎನಿಸಿದ್ದಾರೆ. ಭಾರತ ಕಬಡ್ಡಿ ಸಂಸ್ಥೆ ಭಾನುವಾರ 12 ಆಟಗಾರ್ತಿಯರ ಭಾರತ ತಂಡವನ್ನು ಪ್ರಕಟಿಸಿತು. ಮಹಿಳಾ ತಂಡದ ಕೋಚ್ ಆಗಿ ರಾಜ್ಯದ ತೇಜಸ್ವಿನಿ ಬಾಯಿ ನೇಮಕಗೊಂಡಿದ್ದಾರೆ. 

ಬೆಂಗಳೂರು[ಜು.09]: ಕರ್ನಾಟಕದ ಮಹಿಳಾ ಕಬಡ್ಡಿ ಆಟಗಾರ್ತಿ ಉಷಾ ರಾಣಿ, ಜಕಾರ್ತದಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಭಾರತ ಮಹಿಳಾ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ವಿಷಯವನ್ನು ಅವರ ಕೋಚ್ ಜಗದೀಶ್ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. 

ಏಷ್ಯನ್ ಗೇಮ್ಸ್‌ಗೆ ಆಯ್ಕೆ ಯಾದ ರಾಜ್ಯದ ಏಕೈಕ ಮಹಿಳಾ ಆಟಗಾರ್ತಿ ಎನಿಸಿದ್ದಾರೆ. ಭಾರತ ಕಬಡ್ಡಿ ಸಂಸ್ಥೆ ಭಾನುವಾರ 12 ಆಟಗಾರ್ತಿಯರ ಭಾರತ ತಂಡವನ್ನು ಪ್ರಕಟಿಸಿತು. ಮಹಿಳಾ ತಂಡದ ಕೋಚ್ ಆಗಿ ರಾಜ್ಯದ ತೇಜಸ್ವಿನಿ ಬಾಯಿ ನೇಮಕಗೊಂಡಿದ್ದಾರೆ. 

ಸದ್ಯ ಕೋಚ್ ಬಲಾವನ್ ಸಿಂಗ್ ಮಾರ್ಗದರ್ಶನದಲ್ಲಿ ಮಹಿಳಾ ಕಬಡ್ಡಿ ತಂಡ ಶಿಬಿರದಲ್ಲಿ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ. ಇನ್ನು ಪುರುಷರ ತಂಡದಲ್ಲಿ ರಾಜ್ಯದ ಯಾವ ಆಟಗಾರನಿಗೂ ಸ್ಥಾನ ಸಿಕ್ಕಿಲ್ಲ ಎನ್ನಲಾಗಿದೆ. 
 
loader