ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತ ಮತ್ತೆ ಪದಕ ಗೆದ್ದುಕೊಂಡಿದೆ. 8ನೇ ದಿನದ ಕ್ರೀಡಾಕೂಟದಲ್ಲಿ ಭಾರತೀಯರ ಪ್ರದರ್ಶನ ಹೇಗಿತ್ತು? ಯಾವ ಕ್ರೀಡೆಗಳಲ್ಲಿ ಭಾರತ ಪದಕ ಗೆದ್ದುಕೊಂಡಿದೆ? ಇಲ್ಲಿದೆ.
ಜಕರ್ತಾ(ಆ.26): ಏಷ್ಯನ್ ಗೇಮ್ಸ್ ಕ್ರೀಡಾಕೂಟದ 8ನೇ ದಿನ ಓಟದಲ್ಲಿ ಭಾರತ ಅದ್ವಿತೀಯ ಸಾಧನೆ ಮಾಡಿದೆ. ಮಹಿಳಾ 100 ಮೀಟರ್ ಓಟದಲ್ಲಿ ಭಾರತದ ದ್ಯುತಿ ಚಾಂದ್ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ.
ಮಹಿಳೆಯರ 100 ಮೀಟರ ಓಟವನ್ನ ದ್ಯುತಿ ಚಾಂದ್ 11.32 ಸೆಕುಂಡ್‌ಗಳಲ್ಲಿ ಗುರಿ ತಲುಪೋ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದರು. ಈ ಮೂಲಕ ಭಾರತ 10ನೇ ಬೆಳ್ಳಿ ಪದಕ ಸಂಪಾದಿಸಿತು.
ಪುರುಷರ 10ಸಾವಿರ ಮೀಟರ್‌ನಲ್ಲಿ ಲಕ್ಷ್ಣಣ್ ಗೋವಿಂದನ್ ಕಂಚಿನ ಪದಕ ಗೆದ್ದಿದ್ದರು. ಆದರೆ ಲಕ್ಷ್ಮಣ್ ಅನರ್ಹಗೊಂಡ ಕಾರಣ, ಭಾರತ ಕಂಚಿನ ಪದಕದಿಂದ ವಂಚಿತವಾಯಿತು.
ಭಾರತ 7 ಚಿನ್ನ, 10 ಬೆಳ್ಳಿ, 19 ಕಂಚಿನೊಂದಿಗೆ ಒಟ್ಟು 36 ಪದಕ ಗೆದ್ದು 9ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಚೀನಾ 76 ಚಿನ್ನ, 59 ಬೆಳ್ಳಿ ಹಾಗೂ 37 ಕಂಚಿನೊಂದಿಗೆ ಒಟ್ಟು 172 ಪದಕ ಗೆದ್ದಿದೆ
