Asianet Suvarna News Asianet Suvarna News

ಏಷ್ಯನ್ ಗೇಮ್ಸ್: ಫೈನಲ್ಸ್’ಗೆ ಲಗ್ಗೆಯಿಟ್ಟ ಸೂಪರ್ ಸಿಂಧು

ತೀವ್ರ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಜಪಾನಿನ ಅಕಾನೆ ಯಮಾಗುಚಿ ವಿರುದ್ಧ 21-17, 15-21, 21-10 ಗೇಮ್’ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಏಷ್ಯನ್ ಗೇಮ್ಸ್’ನಲ್ಲಿ ಫೈನಲ್ಸ್’ಗೆ ಲಗ್ಗೆಯಿಟ್ಟು ಹೊಸ ದಾಖಲೆ ಬರೆದಿದ್ದಾರೆ.

Asian Games 2018 PV Sindhu makes Indian badminton history
Author
Jakarta, First Published Aug 27, 2018, 1:01 PM IST

ಜಕಾರ್ತ[ಆ.27]: ಭಾರತದ ಸ್ಟಾರ್ ಶೆಟ್ಲರ್ ಪಿ.ವಿ ಸಿಂಧು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ಸ್’ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್’ನಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ಗೌರವಕ್ಕೆ ಸಿಂಧು ಭಾಜನರಾಗಿದ್ದಾರೆ.

ತೀವ್ರ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಜಪಾನಿನ ಅಕಾನೆ ಯಮಾಗುಚಿ ವಿರುದ್ಧ 21-17, 15-21, 21-10 ಗೇಮ್’ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಏಷ್ಯನ್ ಗೇಮ್ಸ್’ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಸಿಂಧು ಆರಂಭದಿಂದಲೂ ಆಕ್ರಮಣಕಾರಿಯಾಟಕ್ಕೆ ಮುಂದಾದರು, ಹೀಗಾಗಿ ಮೊದಲ ಗೇಮ್ ಅನ್ನು 21-17 ಅಂಕಗಳಿಂದ ಗೆದ್ದುಕೊಂಡರು. ಆ ಬಳಿಕ ಎರಡನೇ ಗೇಮ್’ನಲ್ಲಿ ಜಪಾನ್ ಆಟಗಾರ್ತಿಗೆ ತಿರುಗೇಟು ನೀಡುವಲ್ಲಿ ಸಫಲವಾದರು. ಹೀಗಾಗಿ 15-21 ಅಂಕಗಳಿಂದ ಹಿನ್ನಡೆ ಅನುಭವಿಸಿದರು. ಆದರೆ ನಿರ್ಣಾಯಕ ಗೇಮ್’ನಲ್ಲಿ ಬಲಿಷ್ಠ ಶಾಟ್ ಹಾಗೂ ಸಮಯೋಚಿತ ಡ್ರಾಪ್’ಗಳ ಮೂಲಕ ಎದುರಾಳಿ ಆಟಗಾರ್ತಿಯನ್ನು ಕಂಗಾಲು ಮಾಡಿದ ಸೈನಾ ಮೂರನೇ ಗೇಮ್ ಅನ್ನು 21-10 ಅಂಕಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. 

ಇದೀಗ ಸಿಂಧು ವಿಶ್ವದ ನಂ.1 ಶ್ರೇಯಾಂಕಿತೆ  ತೈವಾನಿನ ತೈ ತ್ಸು ಯಿಂಗ್ ವಿರುದ್ಧ ಚಿನ್ನದ ಪದಕಕ್ಕಾಗಿ ಕಾದಾಡಲಿದ್ದಾರೆ.
 

Follow Us:
Download App:
  • android
  • ios