ಏಷ್ಯನ್ ಗೇಮ್ಸ್: ಸಿಂಧುಗೆ ಒಲಿದ ಬೆಳ್ಳಿ ಪದಕ
ಇಂದು ನಡೆದ ವಿಶ್ವದ ಮಹಿಳೆಯ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ ಫೈನಲ್’ನಲ್ಲಿ ವಿಶ್ವದ ನಂ.1 ಶ್ರೇಯಾಂಕಿತೆ ತೈವಾನಿನ ತೈ ತ್ಸು ಯಿಂಗ್ ವಿರುದ್ಧ 21-13, 21-16 ನೇರ ಗೇಮ್’ಗಳಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಜಕಾರ್ತ[ಆ.28]: ಭಾರತದ ಸ್ಟಾರ್ ಶಟ್ಲರ್ ಪಿ.ವಿ ಸಿಂಧು ಏಷ್ಯನ್ ಗೇಮ್ಸ್’ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎನ್ನುವ ಕೀರ್ತಿಗೆ ಸಿಂಧು ಭಾಜನರಾಗಿದ್ದಾರೆ.
ಇಂದು ನಡೆದ ವಿಶ್ವದ ಮಹಿಳೆಯ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದ ಫೈನಲ್’ನಲ್ಲಿ ವಿಶ್ವದ ನಂ.1 ಶ್ರೇಯಾಂಕಿತೆ ತೈವಾನಿನ ತೈ ತ್ಸು ಯಿಂಗ್ ವಿರುದ್ಧ 21-13, 21-16 ನೇರ ಗೇಮ್’ಗಳಲ್ಲಿ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಇದೀಗ ಇದೇ ವಿಭಾಗದಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಂತಾಗಿದೆ. ಈ ಮೊದಲು ಸೆಮಿಫೈನಲ್’ನಲ್ಲಿ ತೈವಾನಿನ ತೈ ತ್ಸು ಯಿಂಗ್ ಎದುರು ಸೈನಾ ಮುಗ್ಗರಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಆರಂಭದಿಂದಲೂ ನಂ.1 ಶ್ರೇಯಾಂಕಿತೆ ತೈವಾನಿನ ತೈ ತ್ಸು ಯಿಂಗ್, ಸಿಂಧು ವಿರುದ್ಧ ಮೇಲುಗೈ ಸಾಧಿಸಿದರು. ಮೊದಲ ಗೇಮ್ ಅನ್ನು 21-13 ಅಂಕಗಳಿಂದ ಅನಾಯಾಸವಾಗಿ ಗೆದ್ದುಕೊಂಡರು. ಇನ್ನು ಎರಡನೇ ಗೇಮ್’ನಲ್ಲಿ ಸಿಂಧು ಅಲ್ಪಪ್ರತಿರೋಧ ತೋರಿದರಾದರೂ ತೈವಾನಿನ ಆಟಗಾರ್ತಿಯನ್ನು ಮಣಿಸಲು ಸಫಲವಾಗಲಿಲ್ಲ.