ಜಕರ್ತಾ(ಆ.18): 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಇಲ್ಲಿನ ಪಾಲೆಂಬಾಗ್‌ನಲ್ಲಿ ನಡೆದ ಅದ್ಧೂರಿ ಉದ್ಘಾಟನೆ ಸಮಾರಂಭದ ಮೂಲಕ ಪ್ರತಿಷ್ಠಿತ ಕ್ರೀಡಾಕೂಟ ಆರಂಭಗೊಂಡಿದೆ.

ಕ್ರೀಡಾಕೂಟದ ಆರಂಭದಲ್ಲಿ ಕ್ರೀಡಾಪಟುಗಳು ಪಥಸಂಚಲನ ಗಮನೆಸೆಳೆಯಿತು. ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಜಾವಲಿನ್ ಪಟು ನೀರಜ್ ಚೋಪ್ರ ಧ್ವಜಾಧಾರಿಯಾಗಿ ಪಥಸಂಚಲನದಲ್ಲಿ ಭಾರತ ಕ್ರೀಡಾಪಟುಗಳ ತಂಡವನ್ನ ಮುನ್ನಡೆಸಿದರು.

ಈ ಭಾರಿಯ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ 572 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. 36 ವಿವಿಧ ಕ್ರೀಡೆಗಳು ಭಾರತೀಯರ ಪದಕ್ಕಾಗಿ ಹೋರಾಟ ನಡೆಸಲಿದ್ದಾರೆ. 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಹಲವು ಕ್ರೀಡಾಪಟುಗಳ ಮೇಲೆ ಪದಕದ ಭರವಸೆ ಇಡಲಾಗಿದೆ.