ರಜತ ಪದಕ ಗೆದ್ದ ಭಾರತದ ಮಹಿಳಾ ಹಾಕಿ ತಂಡದ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಪಟ್ನಾಯಕ್ ಹಾರೈಸಿದ್ದಾರೆ.
ಭುವನೇಶ್ವರ್(ಸೆ.02]: ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ಮಹಿಳಾ ಹಾಕಿ ತಂಡದ ನಾಲ್ವರು ಒಡಿಶಾ ಆಟಗಾರ್ತಿಯರಿಗೆ ಅಲ್ಲಿನ ಸರ್ಕಾರ ತಲಾ ₹ 1 ಕೋಟಿ ನಗದನ್ನು ನೀಡುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ.
ರಜತ ಪದಕ ಗೆದ್ದ ಭಾರತದ ಮಹಿಳಾ ಹಾಕಿ ತಂಡದ ಸಾಧನೆ ನಿಜಕ್ಕೂ ಮೆಚ್ಚುವಂಥದ್ದು ಎಂದು ಪಟ್ನಾಯಕ್ ಹಾರೈಸಿದ್ದಾರೆ.
ಭಾರತ ಪುರುಷರ ಹಾಕಿ ತಂಡ, ಶನಿವಾರ ನಡೆದ ಪ್ಲೇ ಆಫ್ ಪಂದ್ಯದಲ್ಲಿ 2-1 ಗೋಲುಗಳಲ್ಲಿ ಪಾಕಿಸ್ತಾನ ವಿರುದ್ಧ ಜಯ ಸಾಧಿಸಿ ಕಂಚಿನ ಪದಕ ಗೆದ್ದಿತು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಆಕಾಶ್‌ದೀಪ್ (3ನೇ ನಿ.), ಹರ್ಮನ್‌ಪ್ರೀತ್ ಸಿಂಗ್ (50ನೇ ನಿ.) ಗೋಲು ಗಳಿಸಿದರು. ಪಾಕಿಸ್ತಾನ ಪರ ಮೊಹಮದ್ ಅತಿಕ್ (52ನೇ ನಿ.) ಏಕೈಕ ಗೋಲು ಹೊಡೆದರು.
ಗುರುವಾರ ನಡೆದ ಸೆಮೀಸ್‌ನಲ್ಲಿ ಮಲೇಷ್ಯಾ ಎದುರು ಭಾರತ ಸೋಲುಂಡಿತ್ತು. ಹೀಗಾಗಿ ಹಾಲಿ ಚಾಂಪಿಯನ್ ಭಾರತ ಈ ಬಾರಿಯೂ ಚಿನ್ನ ಸಾಧನೆ ಮಾಡುವ ಅವಕಾಶವನ್ನು ಕೈಚೆಲ್ಲಿತ್ತು. ಕಂಚಿನ ಪದಕಕ್ಕಾಗಿ ಪಾಕಿಸ್ತಾನ ಎದುರು ಕಾದಾಟ ನಡೆಸಿತ್ತು.
