ಏಷ್ಯನ್ ಗೇಮ್ಸ್: ಮಿಶ್ರ ರಿಲೇಯಲ್ಲಿ ಭಾರತಕ್ಕೆ ಬೆಳ್ಳಿ ಪದಕ
3:15.17 ನಿಮಿಷಗಳಲ್ಲಿ ಗುರಿ ಮುಟ್ಟಿದ ಭಾರತೀಯ ಜೋಡಿ ರಜತ ಪದಕಕ್ಕೆ ಚುಂಬಿಸಿದರೆ, 3:11.89 ನಿಮಿಷಗಳಲ್ಲಿ ಗುರಿಮುಟ್ಟಿದ ಬೆಹ್ರೇನ್ ಜೋಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಕಜಾಕಿಸ್ತಾನದ ಜೋಡಿ 3:19.52 ಕಂಚಿಕ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಜಕಾರ್ತ[ಆ.28]: ಅಥ್ಲೇಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದು ಬಂದಿದ್ದು, 4*400 ಮೀಟರ್ ಮಿಶ್ರ ರಿಲೆ ಓಟದಲ್ಲಿ ಮೊಹಮ್ಮದ್ ಅನಾಸ್, ಕನ್ನಡತಿ ಪೂವಮ್ಮ, ಹಿಮಾದಾಸ್ ಹಾಗೂ ಅರೋಕಿಯಾ ರಾಜೀವ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
3:15.17 ನಿಮಿಷಗಳಲ್ಲಿ ಗುರಿ ಮುಟ್ಟಿದ ಭಾರತೀಯ ಜೋಡಿ ರಜತ ಪದಕಕ್ಕೆ ಚುಂಬಿಸಿದರೆ, 3:11.89 ನಿಮಿಷಗಳಲ್ಲಿ ಗುರಿಮುಟ್ಟಿದ ಬೆಹ್ರೇನ್ ಜೋಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರೆ, ಕಜಾಕಿಸ್ತಾನದ ಜೋಡಿ 3:19.52 ಕಂಚಿಕ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಹೀಗಿತ್ತು ಆ ಕ್ಷಣ:
ಭಾರತದ ಈ ಜೋಡಿಯ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
Stupendous teamwork, exceptional result.
— Narendra Modi (@narendramodi) August 28, 2018
The formidable team of @HimaDas8, @muhammedanasyah, Arokia Rajiv and MR Poovamma brings home the Silver in the Mixed 4x400 relay. Congratulations to the athletes. #AsianGames2018