ಏಷ್ಯನ್ ಗೇಮ್ಸ್ 2018: ಸೆಮೀಸ್’ಗೆ ಲಗ್ಗೆಯಿಟ್ಟ ಭಾರತ ಕಬಡ್ಡಿ ತಂಡಗಳು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 22, Aug 2018, 11:16 AM IST
Asian Games 2018 Indian Kabaddi Teams Enter Semifinals with easy win
Highlights

ಮಹಿಳಾ ತಂಡ ಶ್ರೀಲಂಕಾ ವಿರುದ್ಧ 38-12, ಅಂತಿಮ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ 54-22ರಲ್ಲಿ ಜಯಗಳಿಸಿ ಉಪಾಂತ್ಯಕ್ಕೇರಿತು. ಆ.23ಕ್ಕೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.

ಜಕಾರ್ತ[ಆ.22]: 18ನೇ ಏಷ್ಯನ್ ಗೇಮ್ಸ್’ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಕಬಡ್ಡಿ ತಂಡಗಳು ಸೆಮೀಸ್‌ಗೇರಿವೆ. 7 ಬಾರಿ ಚಿನ್ನದ ಪದಕ ವಿಜೇತ ಪುರುಷರ ತಂಡ ಮಂಗಳವಾರ ‘ಎ’ ಗುಂಪಿನ 4ನೇ ಹಾಗೂ ಅಂತಿಮ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 49-30ರ ಅಂತರದಲ್ಲಿ ಜಯ ಗಳಿಸಿತು. 

ಇದೇ ವೇಳೆ ಮಹಿಳಾ ತಂಡ ಶ್ರೀಲಂಕಾ ವಿರುದ್ಧ 38-12, ಅಂತಿಮ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ 54-22ರಲ್ಲಿ ಜಯಗಳಿಸಿ ಉಪಾಂತ್ಯಕ್ಕೇರಿತು. ಆ.23ಕ್ಕೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ.
ಇನ್ನು ಗುಂಪು ಹಂತದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ 23-24 ಅಂತರದಲ್ಲಿ ಆಘಾತಕಾರಿ ಸೋಲು ಕಂಡಿತ್ತು. ಆ ಬಳಿಕ ಮತ್ತೆ ಜಯದ ಹಳಿಗೆ ಮರಳಲು ಯಶಸ್ವಿಯಾಗಿದೆ.

ಇನ್ನು ಭಾರತ ಮಹಿಳಾ ಹಾಕಿ ತಂಡ ತನ್ನ 2ನೇ ಪಂದ್ಯದಲ್ಲಿ ಕಜಕಸ್ತಾನವನ್ನು 21-0 ಗೋಲುಗಳಿಂದ ಸೋಲಿಸಿತು. ಮೊದಲ ಪಂದ್ಯದಲ್ಲಿ ತಂಡ ಇಂಡೋನೇಷ್ಯಾ ವಿರುದ್ಧ 8-0 ಅಂತರದಲ್ಲಿ ಜಯಗಳಿಸಿತ್ತು. ಈ ಮೂಲಕ ‘ಬಿ’ಗುಂಪಿನಲ್ಲಿ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ. ಮೊದಲ ಪಂದ್ಯದಲ್ಲಿ ಇಂಡೋನೇಷ್ಯಾ ವಿರುದ್ಧ 17-0ಯಲ್ಲಿ ಗೆದ್ದಿದ್ದ ಭಾರತ ಪುರುಷರ ತಂಡ ಇಂದು 2ನೇ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ ಸೆಣಸಲಿದೆ.
 

loader