ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ 9ನೇ ದಿನ ಭಾರತ ಪದಕಗಳಿಕೆ ವೇಗ ಇಳಿಮುಖವಾದರೂ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. 9ನೇ ದಿನದಾಟದಲ್ಲಿ ಭಾರತೀಯ ಕ್ರೀಡಾಪಟುಗಳ ಪ್ರದರ್ಶನ ಹೇಗಿತ್ತು? ಪಡೆದ ಪದಕಗಳು ಯಾವುದು? ಇಲ್ಲಿದೆ.

ಜಕರ್ತಾ(ಆ.27): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 38ಕ್ಕೇರಿದೆ. 400 ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ಧರುನ್ ಅಯ್ಯಸ್ವಾಮಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ 11 ಬೆಳ್ಳಿ ಪದಕ ಸಂಪಾದಿಸಿದೆ.

Scroll to load tweet…

ಅಂತಿಮ ಸುತ್ತಿನ ಹೋರಾಟದಲ್ಲಿ ಧರುನ್ ಅಯ್ಯಸ್ವಾಮಿ ಮಿಂಚಿನ ಓಟದ ಮೂಲಕ ಬೆಳ್ಳಿ ಗೆದ್ದರು. 48.96 ಸೆಕುಂಡ್‌ಗಳಲ್ಲಿ ದ್ವಿತೀಯ ಸ್ಥಾನಿಯಾಗಿ ಅಯ್ಯಸ್ವಾಮಿ ಗುರಿ ತಲುಪಿದರು. 49 ಸೆಕುಂಡ್‌ಗಳಲ್ಲಿ 400 ಮೀಟರ್ ಹರ್ಡಲ್ಸ್ ಪೂರೈಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೂ ಧರನ್ ಪಾತ್ರರಾಗಿದ್ದಾರೆ. 

ಭಾರತ ಪದಕ ಪಟ್ಟಿಯಲ್ಲಿ 7 ಚಿನ್ನ, 11 ಬೆಳ್ಳಿ ಹಾಗೂ 20 ಕಂಚಿನೊಂದಿಗೆ ಒಟ್ಟು 38 ಪದಕದೊಂದಿಗೆ 9ನೇ ಸ್ಥಾನದಲ್ಲಿದೆ. ಇನ್ನು ಮೊದಲ ಸ್ಥಾನದಲ್ಲಿರುವ ಚೀನಾ 84 ಚಿನ್ನ, 60 ಬೆಳ್ಳಿ ಹಾಗೂ 40 ಕಂಚಿನೊಂದಿಗೆ ಒಟ್ಟು 184 ಪದಕ ಪಡೆದುಕೊಂಡಿದೆ.