ಜಕರ್ತಾ(ಆ.26):  ಅಥ್ಲೆಟಿಕ್ಸ್‌ನಲ್ಲಿ ಭಾರತ ಭರ್ಜರಿ ಆರಂಭ ಪಡೆದುಕೊಂಡಿದ್ದು, ಪದಕ ಭರವಸೆ ಹೆಚ್ಚಾಗಿದೆ. ಪುರುಷರ 400 ಮೀ. ಓಟದಲ್ಲಿ ಮೊಹಮದ್ ಅನಾಸ್ ಹಾಗೂ ಅರೋಕಿಯಾ ರಾಜೀವ್ ಫೈನಲ್ ಪ್ರವೇಶಿಸಿದ್ದಾರೆ.

 ಮಹಿಳೆಯರ 400 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಹಿಮಾ ದಾಸ್ ಹಾಗೂ ನಿರ್ಮಲಾ ಶೆರೊನ್ ಸಹ್ ಫೈನಲ್‌ಗೇರಿದ್ದಾರೆ. ಮಹಿಳೆಯರ 100 ಮೀ. ಓಟದಲ್ಲಿ ದ್ಯುತಿ ಚಾಂದ್ ಸೆಮಿಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.  ಪುರುಷರ ಹೈಜಂಪ್‌ನಲ್ಲಿ 2.15 ಮೀ. ಜಿಗಿಯುವ ಮೂಲಕ ರಾಜ್ಯದ ಚೇತನ್.ಬಿ ಫೈನಲ್‌ಗೇರಿದರು. ಲಾಂಗ್ ಜಂಪ್‌ನಲ್ಲಿ ಶ್ರೀಶಂಕರ್ ಸಹ ಫೈನಲ್ ಪ್ರವೇಶ ಮಾಡಿದ್ದಾರೆ.

ಪದಕ ಪಟ್ಟಿಯಲ್ಲಿ ಭಾರತ 7 ಚಿನ್ನ, 5 ಬೆಳ್ಳಿ ಹಾಗೂ 17 ಕಂಚಿನೊಂದಿಗೆ ಒಟ್ಟು 29 ಪದಕ ಗೆದ್ದು 8ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಚೀನಾ 72 ಚಿನ್ನ, 51 ಬೆಳ್ಳಿ ಹಾಗೂ 30 ಕಂಚಿನೊಂದಿಗೆ ಒಟ್ಟು 153 ಪದಕ ಗೆದ್ದುಕೊಂಡಿದೆ.