ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಆಗಸ್ಟ್ 18 ರಿಂದ ಆರಂಭಗೊಳ್ಳಲಿರುವ ಅತೀ ದೊಡ್ಡ ಕ್ರೀಡಾಹಬ್ಬಕ್ಕೆ ಭಾರತ ಈಗಾಗಲೇ ಇಂಡೋನೇಷ್ಯಾದ ಜಕರ್ತಾದಲ್ಲಿ ಬೀಡುಬಿಟ್ಟಿದೆ. ಈ ವರೆಗೆ 17 ಏಷ್ಯನ್ ಗೇಮ್ಸ್ ಆಯೋಜಿಸಲಾಗಿದೆ. ಆರಂಭಿಕ 4 ಕ್ರೀಡಾಕೂಟದ ಸಂಕ್ಷಿಪ್ತ ವಿವರ ಇಲ್ಲಿದೆ. 

ಬೆಂಗಳೂರು(ಆ.14): ಮೊದಲ ಏಷ್ಯನ್ ಗೇಮ್ಸ್ ನಡೆದಿದ್ದು 1951ರಲ್ಲಿ. ನವದೆಹಲಿ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸಿತ್ತು. 11 ರಾಷ್ಟ್ರಗಳು ಪಾಲ್ಗೊಂಡಿದ್ದವು. ಜಪಾನ್ 60 ಪದಕಗಳೊಂದಿಗೆ ಮೊದಲ ಸ್ಥಾನ ಪಡೆಯಿತು. 15 ಚಿನ್ನ ಸೇರಿ 51 ಪದಕ ಪಡೆದ ಭಾರತ 2ನೇ ಸ್ಥಾನ ಪಡೆದುಕೊಂಡಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1954: 2ನೇ ಏಷ್ಯನ್ ಗೇಮ್ಸ್1954ರಲ್ಲಿ ಫಿಲಿಪೈನ್ಸ್‌ನ ಮನಿಲಾದಲ್ಲಿ ನಡೆಯಿತು. 19 ರಾಷ್ಟ್ರಗಳು ಕ್ರೀಡಾ ಕೂಟದಲ್ಲಿ ಪಾಲ್ಗೊಂಡಿದ್ದವು. 98 ಪದಕಗಳೊಂದಿಗೆ ಸತತ 2ನೇ ಬಾರಿಗೆ ಜಪಾನ್ ಮೊದಲ ಸ್ಥಾನ ಪಡೆಯಿತು. 5 ಚಿನ್ನ, 4 ಬೆಳ್ಳಿ, 8 ಕಂಚಿನೊಂದಿಗೆ 17 ಗೆದ್ದ ಭಾರತ 5ನೇ ಸ್ಥಾನ ಪಡೆದುಕೊಂಡಿತು.

1958 : 3ನೇ ಆವೃತ್ತಿಯ ಏಷ್ಯನ್ ಗೇಮ್ಸ್ 1958 ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆಯಿತು. 20 ರಾಷ್ಟ್ರಗಳು ಪಾಲ್ಗೊಂಡಿದ್ದವು. 67 ಚಿನ್ನ ಸೇರಿ 138 ಪದಕ ಗೆದ್ದ ಜಪಾನ್ ಮೊದಲ ಸ್ಥಾನ ಪಡೆದು ಹ್ಯಾಟ್ರಿಕ್ ಬಾರಿಸಿತು. 5ಚಿನ್ನ, ತಲಾ 4 ಬೆಳ್ಳಿ ಹಾಗೂ ಕಂಚಿನೊಂದಿಗೆ ಒಟ್ಟು 13 ಪದಕ ಗೆದ್ದ ಭಾರತ 7ನೇ ಸ್ಥಾನ ಪಡೆಯಿತು.

1962 : ಇಂಡೋನೇಷ್ಯಾದ ಜಕಾರ್ತ 1962ರಲ್ಲಿ 4ನೇ ಆವೃತ್ತಿಯ ಗೇಮ್ಸ್‌ಗೆ ಆತಿಥ್ಯ ವಹಿಸಿತು. 17 ರಾಷ್ಟ್ರಗಳು ಕಣಕ್ಕಿಳಿದಿದ್ದವು. ಜಪಾನ್ 152 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡರೆ, 33 ಪದಕ ಗೆದ್ದ ಭಾರತ 3ನೇ ಶ್ರೇಷ್ಠ ರಾಷ್ಟ್ರವಾಗಿ ಹೊರಹೊಮ್ಮಿತು.