ಏಷ್ಯನ್ ಗೇಮ್ಸ್: ಬೆಳ್ಳಿಗೆ ಶೂಟ್ ಮಾಡಿದ ದೀಪಕ್ ಕುಮಾರ್
10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ದೀಪಕ್ ಕುಮಾರ್ ಬೆಳ್ಳಿಗೆ ಗುರಿ ಇಡುವ ಮೂಲಕ ಭಾರತಕ್ಕೆ 18ನೇ ಏಷ್ಯನ್ ಗೇಮ್ಸ್’ನಲ್ಲಿ ಮೊದಲ ಬೆಳ್ಳಿ ಪದಕ ಜಯಿಸಿದ್ದಾರೆ. ಒಟ್ಟು 247.7 ಅಂಕ ಕಲೆ ಹಾಕುವುದರೊಂದಿಗೆ ದೀಪಕ್ ರಜತ ಪದಕ ಜಯಿಸಿದ್ದಾರೆ.
ಜಕಾರ್ತ[ಆ.20]: ಏಷ್ಯನ್ ಗೇಮ್ಸ್’ನ ಎರಡನೇ ಆರಂಭದಲ್ಲೇ ಭಾರತಕ್ಕೆ ದೀಪಕ್ ಕುಮಾರ್ ಬೆಳ್ಳಿ ಪದಕ ಗೆದ್ದು ಕೊಡುವಲ್ಲಿ ಸಫಲವಾಗಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ
10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ದೀಪಕ್ ಕುಮಾರ್ ಬೆಳ್ಳಿಗೆ ಗುರಿ ಇಡುವ ಮೂಲಕ ಭಾರತಕ್ಕೆ 18ನೇ ಏಷ್ಯನ್ ಗೇಮ್ಸ್’ನಲ್ಲಿ ಮೊದಲ ಬೆಳ್ಳಿ ಪದಕ ಜಯಿಸಿದ್ದಾರೆ. ಒಟ್ಟು 247.7 ಅಂಕ ಕಲೆ ಹಾಕುವುದರೊಂದಿಗೆ ದೀಪಕ್ ರಜತ ಪದಕ ಜಯಿಸಿದ್ದಾರೆ.
ಇನ್ನು ಚೀನಾದ ಸ್ಪರ್ಧಿ ಹೋರನ್ ಯಂಗ್ 249.1 ಅಂಕದೊಂದಿಗೆ ಚಿನ್ನದ ಪದಕ ಜಯಿಸಿದರೆ, ಚೈನೀಸ್ ತೈಪೆಯ ಶೋಚೋನ್ ಲೂ ಕಂಚಿನ ಪದಕ ಜಯಿಸಿದರು.
ಇದಕ್ಕೂ ಮೊದಲು ರವಿಕುಮಾರ್-ಅಪೂರ್ವಿ ಚಾಂಡಿಲಾ ಜೋಡಿ 10 ಮೀಟರ್ ಏರ್’ರೈಫಲ್ಸ್ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವುದರೊಂದಿಗೆ ಭಾರತದ ಪದಕದ ಖಾತೆ ತೆರೆದಿತ್ತು. ಆ ಬಳಿಕ ಕುಸ್ತಿಯಲ್ಲಿ ಭಜರಂಗ್ ಪೂನಿಯಾ ಚಿನ್ನದ ಪದಕ ಗೆದ್ದಿದ್ದರು.