ಜಕಾರ್ತ[ಆ.23]: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್’ಗಳು ಪದಕದ ಬೇಟೆ ಮುಂದುವರೆಸಿದ್ದು, ಕೇವಲ 15 ವರ್ಷದ ಯುವ ಶೂಟರ್ ಶಾರ್ದುಲ್ ವಿಹಾನ್ ಬೆಳ್ಳಿ ಗೆದ್ದು ಇತಿಹಾಸ ಬರೆದಿದ್ದಾನೆ.

ಪುರುಷರ ಡಬಲ್ ಟ್ರ್ಯಾಪ್ ಶೂಟಿಂಗ್’ನಲ್ಲಿ ಶಾರ್ದುಲ್ ವಿಹಾನ್ ನಿಖರವಾದ ಗುರಿಯಿಡುವ ಮೂಲಕ ಬೆಳ್ಳಿ ಪದಕ ಜಯಿಸಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್’ನ ಶೂಟಿಂಗ್’ನಲ್ಲಿ ಬೆಳ್ಳಿ ಗೆದ್ದ ಅತಿ ಕಿರಿಯ ಶೂಟರ್ ಎನ್ನುವ ಕೀರ್ತಿಗೆ ವಿಹಾನ್ ಪಾತ್ರರಾಗಿದ್ದಾರೆ.

ಇದಕ್ಕೂ ಮೊದಲು ಭಾರತದ ಮಹಿಳಾ ಶೂಟರ್’ಗಳು ಡಬಲ್ ಟ್ರ್ಯಾಪ್ ಶೂಟಿಂಗ್’ನಲ್ಲಿ ನಿರಾಸೆ ಅನುಭವಿಸಿದರು. ಶ್ರೇಯಸಿ ಸಿಂಗ್ ಆರನೇ ಸ್ಥಾನಕ್ಕೆ ತನ್ನ ಹೋರಾಟ ಮುಗಿಸಿದರೆ, ವರ್ಷಾ ವರ್ಮನ್ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.