ಈ ಟೂರ್ನಿಯಲ್ಲಿ 10 ತೂಕ ವಿಭಾಗ(ವೇಯ್ಟ್ ಕೆಟೆಗರೆ)ದಲ್ಲಿನ ಅಗ್ರ ಆರು ಸ್ಥಾನಗಳಿಸುವ ಬಾಕ್ಸರ್'ಗಳು, ವರ್ಲ್ಡ್ ಚಾಂಪಿಯನ್'ಶಿಪ್'ನಲ್ಲಿ ಪಾಲ್ಗೊಳ್ಳಲು ಅರ್ಹತೆಗಿಟ್ಟಿಸಿಕೊಳ್ಳಲಿದ್ದಾರೆ.   

ತಾಷ್ಕೆಂಟ್‌(ಮೇ.03): ಇಲ್ಲಿ ನಡೆಯುತ್ತಿರುವ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಾಲ್ವರು ಬಾಕ್ಸರ್‌'ಗಳು ಕ್ವಾರ್ಟರ್‌'ಫೈನಲ್‌ ಪ್ರವೇಶಿಸಿದ್ದಾರೆ.

60 ಕೆ.ಜಿ ವಿಭಾಗದಲ್ಲಿ ಶಿವ ಥಾಪ, 91 ಕೆ.ಜಿ ವಿಭಾಗದಲ್ಲಿ ಸುಮಿತ್‌ ಸಾಂಗ್ವಾನ್‌, 81 ಕೆ.ಜಿ ವಿಭಾಗದಲ್ಲಿ ಮನೀಶ್‌ ಪನ್ವಾರ್‌ ಹಾಗೂ 49 ಕೆ.ಜಿ ವಿಭಾಗದಲ್ಲಿ ಕವೀಂದರ್‌ ಸಿಂಗ್‌ ಬಿಶ್ತಾ ಅಂತಿಮ 8ರ ಸುತ್ತಿಗೇರಿ​ದ್ದಾರೆ.

ಶಿವಥಾಪ ಕಿರ್ಗಿಸ್ತಾನದ ಒಮೂರ್ಬೆಕ್‌ ಮಲಬಾಕೊವ್‌ ವಿರುದ್ಧ ಜಯ ಸಾಧಿಸಿದರೆ, ಸುಮಿತ್‌ ಮಂಗೋಲಿಯಾದ ಎರ್ಡೆನ್ಬಾರ್ಯ ಸ್ಯಾಂಡ​ಗ್ಸುರೆನ್‌ರನ್ನು ಮಣಿಸಿದರು.

ಈ ಟೂರ್ನಿಯಲ್ಲಿ 28 ದೇಶಗಳಿಂದ 179 ಬಾಕ್ಸರ್'ಗಳು ಪಾಲ್ಗೊಂಡಿದ್ದು, ಜರ್ಮನಿಯ ಹಮ್ಬರ್ಗ್'ನಲ್ಲಿ ಆಗಸ್ಟ್-ಸೆಪ್ಟೆಂಬರ್'ನಲ್ಲಿ ನಡೆಯಲಿರುವ ವರ್ಲ್ಡ್ ಚಾಂಪಿಯನ್'ಶಿಪ್'ನಲ್ಲಿ ಪಾಲ್ಗೊಳ್ಳಲು ಬಾಕ್ಸರ್'ಗಳು ಕಾದಾಡಲಿದ್ದಾರೆ.

ಈ ಟೂರ್ನಿಯಲ್ಲಿ 10 ತೂಕ ವಿಭಾಗ(ವೇಯ್ಟ್ ಕೆಟೆಗರೆ)ದಲ್ಲಿನ ಅಗ್ರ ಆರು ಸ್ಥಾನಗಳಿಸುವ ಬಾಕ್ಸರ್'ಗಳು, ವರ್ಲ್ಡ್ ಚಾಂಪಿಯನ್'ಶಿಪ್'ನಲ್ಲಿ ಪಾಲ್ಗೊಳ್ಳಲು ಅರ್ಹತೆಗಿಟ್ಟಿಸಿಕೊಳ್ಳಲಿದ್ದಾರೆ.

2015ರ ಎಷ್ಯನ್ ಚಾಂಪಿಯನ್ಸ್'ಶಿಪ್'ನಲ್ಲಿ ಭಾರತ ನಾಲ್ಕು ಪದಕಗಳನ್ನು ಗೆದ್ದುಕೊಂಡಿತ್ತು.