ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್ ಧೋನಿ ವಿಕೆಟ್ ಕೀಪಿಂಗ್‌ನಲ್ಲಿ ದಾಖಲೆ ಬರೆದಿದ್ದಾರೆ. ಧೋನಿ ಮಿಂಚಿನ ಸ್ಟಂಪ್ ಔಟ್‌ಗೆ ಟ್ವಟರಿಗರು ಹೇಳಿದ್ದೇನು? ಇಲ್ಲಿದೆ.
ದುಬೈ(ಸೆ.28): ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಎಂ.ಎಸ್ ಧೋನಿ 2 ಸ್ಟಂಪ್ ಮಾಡೋ ಮೂಲಕ ತಂಡಕ್ಕೆ ಮೇಲುಗೈ ತಂದುಕೊಟ್ಟರು. ಅದರಲ್ಲೂ ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ ಲಿಟ್ಟನ್ ದಾಸ್ ಸ್ಟಂಪ್ ಔಟ್ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ಷಣಾರ್ಧದಲ್ಲೇ ಧೋನಿ ಸ್ಟಂಪ್ ಔಟ್ ಮಾಡೋ ಮೂಲಕ ಲಿಟ್ಟನ್ ದಾಸ್ ಆರ್ಭಟಕ್ಕೆ ಬ್ರೇಕ್ ಹಾಕಿದರು. ಧೋನಿ ಸ್ಟಂಪಿಂಗ್ ಮಿಂಚಿನ ವೇಗಕ್ಕೆ ಸವಾಲು ಹಾಕಿದ್ದಾರೆ ಎಂದು ಟ್ವಿಟರಿಗರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿದೆ ಟ್ವಿಟರಿಗರ ಪ್ರತಿಕ್ರಿಯೆ.
