ದುಬೈ(ಸೆ.23): ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಗೆಲುವಿಗೆ 238 ರನ್ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾ ದಿಟ್ಟ ಹೋರಾಟ ನೀಡುತ್ತಿದೆ. ಆರಂಭಿಕರಾಗ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ.

ರೋಹಿತ್ ಹಾಗೂ ಶಿಖರ್ ಧವನ್ ಜೊತೆಯಾಟದಿಂದ ಭಾರತ ಶತಕದ ಸನಿಹದಲ್ಲಿದೆ. ಧವನ್ 26ನೇ ಅರ್ಧಶತಕ ದಾಖಲಿಸಿದರು. ಇನ್ನು ರೋಹಿತ್ ಶರ್ಮಾ ಅಜೇಯ 42 ರನ್ ಸಿಡಿಸಿ ಮುನ್ನಗ್ಗುತ್ತಿದ್ದಾರೆ. ಸದ್ಯ  ಭಾರತ  ವಿಕೆಟ್ ನಷ್ಟವಿಲ್ಲದೆ 91 ರನ್ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗಧಿತ 50 ಓವರ್‌‌ಗಳಲ್ಲಿ 7 ವಿಕೆಟ್ ನಷ್ಟಕಕ್ಕೆ 237 ರನ್ ಪೇರಿಸಿತು. ಶೋಯಿಬ್ ಮಲ್ಲಿಕ್ 78 , ನಾಯಕ ಸರ್ಫರಾಜ್ ಅಹಮ್ಮದ್ 44 ರನ್ ಕಾಣಿಕೆ ನೀಡಿದ್ದರು.