ಅಫ್ಘಾನಿಸ್ತಾನ ವಿರುದ್ದದ ಪಂದ್ಯಕ್ಕೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಅಚ್ಚರಿ ಕಾದಿದೆ. ಟೀಂ ಇಂಡಿಯಾಗೆ ಎಂ.ಎಸ್ ಧೋನಿ ಮತ್ತೆ ನಾಯಕರಾಗಿದ್ದಾರೆ. ಈ ಬದಲಾವಣೆ ನಡೆದಿದ್ದು ಹೇಗೆ?
ದುಬೈ(ಸೆ.25): ಅಫ್ಘಾನಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಅಚ್ಚರಿ ಕಾದಿದೆ. ರೋಹಿತ್ ಶರ್ಮಾ ಬದಲು ಟೀಂ ಇಂಡಿಯಾ ನಾಯಕನಾಗಿ ಎಂ.ಎಸ್ ಧೋನಿ ಕಣಕ್ಕಿಳಿದಿದ್ದಾರೆ.
ಟೀಂ ಇಂಡಿಯಾ ನಾಯಕತ್ವ ತ್ಯಜಿಸಿದ್ದ ಎಂ.ಎಸ್ ಧೋನಿ ಇದೀಗ ಮತ್ತೆ ಭಾರತ ತಂಡವನ್ನ ಮುನ್ನಡೆಸುತ್ತಿದ್ದಾರೆ. ಆದರೆ ನಾಯಕನಾಗಿ ಕಮ್‌ಬ್ಯಾಕ್ ಪಂದ್ಯದಲ್ಲಿ ಧೋನಿ ಟಾಸ್ ಸೋತರು. ಹೀಗಾಗಿ ಅಫ್ಘಾನಿಸ್ತಾನ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದಾರೆ. ಹೀಗಾಗಿ ಎಂ.ಎಸ್ ಧೋನಿ ನಾಯಕನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಧೋನಿ ನಾಯಕನಾಗಿ 200ನೇ ಪಂದ್ಯ ಆಡುತ್ತಿದ್ದಾರೆ. ತಂಡದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಸ್ಥಾನ ಪಡೆದಿದ್ದಾರೆ.
ಉತ್ತರ ಪ್ರದೇಶ ಯುವ ವೇಗಿ ದೀಪಕ್ ಚಹಾರ್ ಪಾದಾರ್ಪಣೆ ಮಾಡಿದ್ದಾರೆ. ಜಸ್‌ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್‌ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಖಲೀಲ್ ಅಹಮ್ಮದ್ ಹಾಗೂ ದೀಪಕ್ ಚಹಾರ್ ವೇಗದ ಜವಾಬ್ದಾರಿ ನಿರ್ವಹಿಸಲಿದ್ದಾರೆ.
