ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯ ಟಾಸ್ ಪ್ರಕ್ರಿಯೆಯಿಂದಲೇ ಕುತೂಹಲ ಕೆರಳಿಸಿದೆ. ಒಂದೆಡೆ ಎಂ.ಎಸ್ ಧೋನಿ ಮತ್ತೆ ನಾಯಕನಾಗಿದ್ದರೆ, ಇತ್ತ ಅಫ್ಘಾನ್ ಆರಂಭಿಕ ಶತಕ ಸಿಡಿಸಿ ಮಿಂಚಿದ್ದಾರೆ. ಇಲ್ಲಿದೆ ಪಂದ್ಯದ ಹೈಲೈಟ್ಸ್

ದುಬೈ(ಸೆ.25): ಭಾರತ ವಿರುದ್ಧದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಆಫ್ಘಾನಿಸ್ತಾನ ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ಶೆಹಝಾದ್ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಮೂಲಕ ಭಾರತ ವಿರುದ್ಧ ಮೊದಲ ಶತಕ ಸಿಡಿಸಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಅಫ್ಘಾನಿಸ್ತಾನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆರಂಭಿಕ ಮೊಹಮ್ಮದ್ ಶೆಹಝಾದ್ ಆರ್ಭಟಿಸಿದರೆ, ಇತರ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಮತ್ತೊರ್ವ ಆರಂಭಿಕ ಜಾವೆದ್ ಅಹಮದಿ 5 ರನ್ ಸಿಡಿಸಿ ಸ್ಟಂಪ್ ಔಟಾದರು. ಹಶ್ಮತುಲ್ಹಾ ಶಾಹಿದಿ ಹಾಗೂ ನಾಯಕ ಅಸ್ಗರ್ ಅಫ್ಘಾನ್ ಶೂನ್ಯ ಸುತ್ತಿದರು. ವಿಕೆಟ್ ಪತನದ ನಡುವೆಯೂ ಅದ್ಬುತ ಪ್ರದರ್ಶನ ನೀಡಿದ ಮೊಹಮ್ಮದ್ ಏಕದಿನ ಕ್ರಿಕೆಟ್‌ನಲ್ಲಿ 5ನೇ ಶತಕ ಪೂರೈಸಿದರು. ಸದ್ಯ ಅಫ್ಘಾನಿಸ್ತಾನ 4 ವಿಕೆಟ್ ನಷ್ಟಕ್ಕೆ 132 ರನ್ ಸಿಡಿಸಿದೆ.