ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಒಂದೆಡೆ ಭಾರತ ಹಾಗೂ ಪಾಕಿಸ್ತಾನ ಹೋರಾಟ ನಡೆಸುತ್ತಿದ್ದರೆ, ಇತ್ತ ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ಮುುಖಾಮುಖಿಯಾಗಿದೆ. ಇಲ್ಲಿದೆ ಬಾಂಗ್ಲಾ ಹಾಗೂ ಆಫ್ಘಾನ್ ಹೋರಾಟದ ಅಪ್‌ಡೇಟ್ಸ್
ಅಬು ದಾಬಿ(ಸೆ.23): ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತದ ಗೆಲುವಿಗೆ ಪಾಕಿಸ್ತಾನ 238 ರನ್ ಟಾರ್ಗೆಟ್ ನೀಡಿದ್ದರೆ, ಮತ್ತೊಂದು ಪಂದ್ಯದಲ್ಲಿ ಆಫ್ಘಾನಿಸ್ತಾನ ಗೆಲುವಿಗೆ ಬಾಂಗ್ಲಾದೇಶ 250 ರನ್ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ ನಿಗಧಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 249 ರನ್ ಸಿಡಿಸಿದೆ. ಇಮ್ರುಲ್ ಕೈಸ್ ಅಜೇಯ 72, ಮೊಹಮ್ಮದುಲ್ಲಾ 74 ರನ್ ಹಾಗೂ ಲಿಟ್ಟನ್ ದಾಸ್ 41 ರನ್‌ಗಳ ಕಾಣಿಕೆ ನೀಡಿದರು.
ಅಫ್ಘಾನಿಸ್ತಾನ ಪರ ಅಫ್ತಾಬ್ ಅಲಮ್ 3, ಮಜೀಬ್ ಯುಆರ್ ರೆಹಮಾನ್ ಹಾಗೂ ರಶೀದ್ ಖಾನ್ ತಲಾ 1 ವಿಕೆಟ್ ಪಡೆದು ಮಿಂಚಿದರು. ಇದೀಗ ಅಫ್ಘಾನಿಸ್ತಾನ 250 ರನ್ ಟಾರ್ಗೆಟ್ ಬೆನ್ನಟ್ಟಬೇಕಿದೆ.
