Asianet Suvarna News Asianet Suvarna News

ಪಾಕಿಸ್ತಾನ ವಿರುದ್ಧ ಭಾರತಕ್ಕೆ ಭರ್ಜರಿ 9 ವಿಕೆಟ್ ಗೆಲುವು

 ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ 9 ವಿಕೆಟ್ ಗೆಲುವು ಸಾಧಿಸಿದೆ. ಈ ಮೂಲಕ ಸತತ 2ನೇ ಭಾರಿ ಪಾಕಿಸ್ತಾನ ತಂಡವನ್ನ ಬಗ್ಗುಬಡಿದಿದೆ ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

Asia Cup cricket 2018 India beat Pakistan by 9 wickets
Author
Bengaluru, First Published Sep 24, 2018, 12:05 AM IST
  • Facebook
  • Twitter
  • Whatsapp

ದುಬೈ(ಸೆ.23): ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಸೂಪರ್ 4ಹಂತದ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಏಷ್ಯಾಕಪ್ ಫೈನಲ್ ಪ್ರವೇಶ ಬಹುತೇಕ ಖಚಿತ ಪಡಿಸಿದೆ. ಪಾಕಿಸ್ತಾನ ವಿರುದ್ಧ ಗೆಲುವಿಗೆ 238 ರನ್ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ದಾಖಲೆಯ ಜೊತೆಯಾಟ ನೀಡಿದ್ದಾರೆ. ಅಬ್ಬರಿಸಿದ ಶಿಖರ್ ಧವನ್  ಏಕದಿನ ಕ್ರಿಕೆಟ್‌ನಲ್ಲಿ 15ನೇ ಶತಕ ಸಿಡಿಸಿದರು. 

ಇಷ್ಟೇ ಅಲ್ಲ, ಏಷ್ಯಾಕಪ್, ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಎರಡೆರಡು ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೂ ಧವನ್ ಪಾತ್ರರಾಗಿದ್ದಾರೆ. ಧವನ್ 114 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು.

ಧವನ್‌ಗೆ ಉತ್ತಮ ಸಾಥ್ ನೀಡಿದ ರೋಹಿತ್ ಶರ್ಮಾ 94 ರನ್ ಸಿಡಿಸುತ್ತಿದ್ದಂತೆ, ಏಕದಿನ ಕ್ರಿಕೆಟ್‌ನಲ್ಲಿ 7000 ರನ್ ಪೂರೈಸಿದರು. 106 ಎಸೆತದಲ್ಲಿ ರೋಹಿತ್ ಸೆಂಚುರಿ ಪೂರೈಸಿದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ 19 ನೇ ಶತಕ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. 

ರೋಹಿತ್ ಶರ್ಮಾ ಜೊತೆಗೂಡಿದ ಅಂಬಾಟಿ ರಾಯುಡು ಅಜೇಯ 11 ರನ್ ಸಿಡಿಸಿದರೆ, ರೋಹಿತ್ 111 ಅಜೇಯ ರನ್ ಬಾರಿಸಿದರು. ಈ ಮೂಲಕ ಭಾರತ 39.3 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಈ ಗೆಲುವಿನ ಮೂಲಕ ಭಾರತದ ಏಷ್ಯಾಕಪ್ ಫೈನಲ್ ಪ್ರವೇಶ ಬಹುತೇಕ ಖಚಿತಗೊಂಡಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗಧಿತ 50 ಓವರ್‌‌ಗಳಲ್ಲಿ 7 ವಿಕೆಟ್ ನಷ್ಟಕಕ್ಕೆ 237 ರನ್ ಪೇರಿಸಿತು. ಶೋಯಿಬ್ ಮಲ್ಲಿಕ್ 78 , ನಾಯಕ ಸರ್ಫರಾಜ್ ಅಹಮ್ಮದ್ 44 ರನ್ ಕಾಣಿಕೆ ನೀಡಿದ್ದರು.
 

Follow Us:
Download App:
  • android
  • ios