Asianet Suvarna News Asianet Suvarna News

ಆಫ್ಘಾನ್’ನ ಶಹಜಾದ್ ಅವರನ್ನು ಸಂಪರ್ಕಿಸಿದ ಬುಕ್ಕಿ..!

ತಮ್ಮನ್ನು ಬುಕ್ಕಿ ಸಂಪರ್ಕಿಸಿದ ವಿಷಯವನ್ನು ಕೂಡಲೇ ತಂಡದ ಆಡಳಿತದ ಗಮನಕ್ಕೆ ತಂದ ಶಹಜಾದ್, ಬಳಿಕ ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕಕ್ಕೂ ಮಾಹಿತಿ ನೀಡಿದ್ದಾರೆ.

Asia Cup Cricket 2018 Afghanistan Mohammad Shahzad reports spot fixing offer
Author
Dubai - United Arab Emirates, First Published Sep 25, 2018, 1:45 PM IST

ದುಬೈ(ಸೆ.25): ಆಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮೊಹಮದ್ ಶಹಜಾದ್, ಏಷ್ಯಾಕಪ್ ವೇಳೆ ತಮ್ಮನ್ನು ಬುಕ್ಕಿಯೊಬ್ಬ ಸಂಪರ್ಕಿಸಿ ಸ್ಪಾಟ್ ಫಿಕ್ಸಿಂಗ್ ನಡೆಸಲು ಪ್ರಸ್ತಾಪವಿಟ್ಟ ಎಂದು ಐಸಿಸಿಗೆ ದೂರು ನೀಡಿದ್ದಾರೆ. ಆದರೆ ಶಹಜಾದ್ ಬಳಿ ಸ್ಪಾಟ್ ಫಿಕ್ಸಿಂಗ್ ನಡೆಸುವಂತೆ ಕೇಳಿದ್ದು, ಏಷ್ಯಾಕಪ್ ಪಂದ್ಯದಲ್ಲಲ್ಲ ಬದಲಾಗಿ ಅ.5-23ರ ವರೆಗೂ ಶಾರ್ಜಾದಲ್ಲಿ ನಡೆಯಲಿರುವ ಚೊಚ್ಚಲ ಆಫ್ಘನ್ ಪ್ರೀಮಿಯರ್ ಟಿ20 ಲೀಗ್‌ನಲ್ಲಿ ಎಂದು ತಿಳಿದುಬಂದಿದೆ.

ತಮ್ಮನ್ನು ಬುಕ್ಕಿ ಸಂಪರ್ಕಿಸಿದ ವಿಷಯವನ್ನು ಕೂಡಲೇ ತಂಡದ ಆಡಳಿತದ ಗಮನಕ್ಕೆ ತಂದ ಶಹಜಾದ್, ಬಳಿಕ ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕಕ್ಕೂ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಲೆಕ್ಸ್ ಮಾರ್ಷಲ್, ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಳೆದೊಂದು ವರ್ಷದಲ್ಲಿ ಸ್ಪಾಟ್ ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ 32 ಪ್ರತ್ಯೇಕ ತನಿಖೆಗಳನ್ನು ನಡೆಸಲಾಗಿದೆ ಎಂದಿದ್ದಾರೆ.

ಶಂಕಿತರ ಪೈಕಿ 8 ಆಟಗಾರರು ಸೇರಿದ್ದು, ಐವರು ಆಡಳಿತಗಾರರು ಇಲ್ಲವೇ ಸಹಾಯಕ ಸಿಬ್ಬಂದಿಯಾಗಿದ್ದಾರೆ. 5 ಅಂತಾರಾಷ್ಟ್ರೀಯ ತಂಡಗಳ ನಾಯಕರು ತಮ್ಮನ್ನು ಬುಕ್ಕಿಗಳು ಸಂಪರ್ಕಿಸಿದ್ದಾಗಿ ಐಸಿಸಿಗೆ ಮಾಹಿತಿ ನೀಡಿದ್ದಾರೆ’ ಎಂದು ಅಲೆಕ್ಸ್ ತಿಳಿಸಿದ್ದಾರೆ. ಈ ಬಗ್ಗೆ ಕೆಲ ತಿಂಗಳುಗಳ ಹಿಂದೆಯೂ ಅಲೆಕ್ಸ್ ಮಾತನಾಡಿದ್ದರು. ಭಾರತೀಯ ಬುಕ್ಕಿಗಳು ಐಸಿಸಿಗೆ ತಲೆನೋವಾಗಿದ್ದಾರೆ ಎಂದು ಅಲೆಕ್ಸ್ ಆರೋಪಿಸಿದ್ದರು.

Follow Us:
Download App:
  • android
  • ios