Asianet Suvarna News Asianet Suvarna News

ಬದ್ಧವೈರಿ ಪಾಕಿಸ್ತಾನ ವಿರುದ್ದ ಭಾರತ ಆರ್ಭಟ-ಗೆಲುವಿನತ್ತ ರೋಹಿತ್ ಸೈನ್ಯ!

ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಹೋರಾಟದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಟೀಂ ಇಂಡಿಯಾ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಮಹತ್ವದ ಪಂದ್ಯದ ಅಪ್‌ಡೇಟ್ಸ್ ಇಲ್ಲಿದೆ.

Asia cup 2018 Pakistan strikes team india openers
Author
Bengaluru, First Published Sep 19, 2018, 10:24 PM IST

ದುಬೈ(ಸೆ.19): ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ನೀಡಿದ 163 ರನ್ ಟಾರ್ಗೆಟ್ ಪಡೆದಿರುವ ಟೀಂ ಇಂಡಿಯಾ ಗೆಲುವಿನತ್ತ ದಾಪುಗಾಲಿಟ್ಟಿದೆ. ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ 86 ರನ್ ಜೊತೆಯಾಟ ನೀಡೋ ಮೂಲಕ ಭಾರತಕ್ಕೆ ಮೇಲುಗೈ ತಂದುಕೊಟ್ಟರು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ 39 ಎಸೆತದಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 52 ರನ್ ಸಿಡಿಸಿ ಔಟಾದರು. ಈ ಮೂಲಕ ರೋಹಿತ್ ತಮ್ಮ ಅತೀ ವೇಗದ ಏಕದಿನ ಅರ್ಧಶತಕ ಸಿಡಿಸಿದರು.  

ರೋಹಿತ್ ಶರ್ಮಾ ಬೆನ್ನಲ್ಲೇ ಶಿಖರ್ ಧವನ್ ಪೆವಿಲಿಯನ್ ಸೇರಿದರು. ಧವನ್ 46 ರನ್ ಸಿಡಿಸಿ ಔಟಾದರು.   ಸದ್ಯ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 113 ರನ್  ಸಿಡಿಸಿದೆ. ಈ ಮೂಲಕ ಗೆಲುವಿಗೆ ಇನ್ನು 50 ರನ್ ಅವಶ್ಯಕತೆ ಇದೆ.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಟೀಂ ಇಂಡಿಯಾ ಅದ್ಬುತ ಬೌಲಿಂಗ್ ದಾಳಿಗೆ ತತ್ತರಿಸಿತು. ಹೀಗಾಗಿ ಪಾಕ್ 162 ರನ್‌ಗೆ ಆಲೌಟ್ ಆಯಿತು. ಭಾರತದಪರ ಭುವನೇಶ್ವರ್ ಕುಮಾರ್ ಹಾಗೂ ಕೇದಾರ್ ಜಾಧವ್ ತಲಾ 3 ವಿಕೆಟ್ ಪಡೆದದರು. ಇನ್ನು ಜಸ್‌ಪ್ರೀತ್ ಬುಮ್ರಾ 2 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಕಬಳಿಸಿದರು.
 

Follow Us:
Download App:
  • android
  • ios