ದುಬೈ(ಸೆ.18) ಸಂಪ್ರಾದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಭಾರತ ಆರಂಭಿಕ ಮೇಲುಗೈ ಸಾಧಿಸಿದೆ. ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಕುಸಿದ ಪಾಕಿಸ್ತಾನ 6ನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಪಾಕಿಸ್ತಾನ ಆರಂಭದಲ್ಲೇಇಮಾಮ್ ಉಲ್ ಹಕ್ ಹಾಗೂ ಫಕರ್ ಜಮಾನ್ ವಿಕೆಟ್ ಕಳೆದುಕೊಂಡಿತು.  ಆದರೆ ಬಾಬರ್ ಅಜಮ್ ಹಾಗೂ ಶೋಯಿಬ್ ಮಲ್ಲಿಕ್ ಜೊತೆಯಾಟದಿಂದ ಪಾಕ್ ಚೇತರಿಸಿಕೊಂಡಿತು.

ಬಾಬರ್ ಅಜಮ್ 47 ರನ್ ಸಿಡಿಸಿ ಔಟಾದರೆ, ನಾಯಕ ಸರ್ಫಾರಜ್ ಖಾನ್ 6 ರನ್ ಗಳಿಸಿ ನಿರ್ಗಮಿಸಿದರು. ಆಸರೆಯಾಗಿದ್ದ ಶೋಯಿಬ್ ಮಲ್ಲಿಕ್ 43 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಆಸಿಫ್ ಆಲಿ 9 ರನ್ ಸಿಡಿಸಿ ಪೆವೆಲಿಯನ್ ಸೇರಿಕೊಂಡರು.

ಪಾಕಿಸ್ತಾನ ಸದ್ಯ 6 ವಿಕೆಟ್ ನಷ್ಟಕ್ಕೆ 117 ರನ್ ಸಿಡಿಸಿದೆ. ಶದಬ್ ಖಾನ್ ಹಾಗೂ ಫಾಹಿಮ್ ಅಶ್ರಫ್ ತಂಡಕ್ಕೆ ಆಸರೆಯಾಗಿದ್ದಾರೆ. ಭಾರತದ ಪರ ಭುವನೇಶ್ವರ್ ಕುಮಾರ್ ಹಾಗೂ ಕೇದಾರ್ ಜಾದವ್ ತಲಾ 2 ವಿಕೆಟ್ ಪಡೆದು ಮಿಂಚಿದರು.