ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯದಲ್ಲಿ ಗೆಲುವು ಸಾಧಿಸುವವರು ಯಾರು? ದುಬೈ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ಎಷ್ಟು ಬಾರಿ ಹೋರಾಟ ನಡೆಸಿದೆ. ಇದರಲ್ಲಿ ಗರಿಷ್ಠ ಗೆಲುವು ಯಾರಿಗೆ ? ಇಲ್ಲಿದೆ ಫುಲ್ ಡಿಟೇಲ್ಸ್.

ದುಬೈ(ಸೆ.18): ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಹೋರಾಟ ವೇದಿಕೆ ಸಜ್ಜಾಗಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಒಟ್ಟು ಮುಖಾಮುಖಿಯಲ್ಲಿ ಪಾಕಿಸ್ತಾನ ಹೆಚ್ಚು ಗೆಲುವಿನ ಸಿಹಿ ಅನುಭವಿಸಿದೆ ನಿಜ. ಆದರೆ 90ರ ದಶತಗಳ ಬಳಿಕ ಪಾಕಿಸ್ತಾನ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಿದೆ. 

ಕೆಲವೇ ಹೊತ್ತಲ್ಲೇ ಆರಂಭಗೊಳ್ಳಲಿರುವ ಭಾರತ -ಪಾಕಿಸ್ತಾನ ಪಂದ್ಯ ಆರಂಭಗೊಳ್ಳಲಿದೆ. ಆದರೆ ಯುಎಇ ಕ್ರೀಡಾಂಗಣದಲ್ಲಿ ಮುಖಾಮುಖಿಯಲ್ಲಿ ಪಾಕಿಸ್ತಾನ ತಂಡವೇ ಬಲಿಷ್ಠ. ಕಾರಣ ದುಬೈನಲ್ಲಿ ಪಾಕಿಸ್ತಾನ 19 ಗೆಲುವು ಸಾಧಿಸಿದ್ದರೆ, ಭಾರತ ಕೇವಲ 7 ಗೆಲುವು ಸಾಧಿಸಿದೆ.

ಭಾರತ-ಪಾಕಿಸ್ತಾನ ಮುಖಾಮುಖಿ

ಪಂದ್ಯಭಾರತ(ಗೆಲುವು)ಪಾಕಿಸ್ತಾನ(ಗೆಲುವು)ರದ್ದು
ಒಟ್ಟು12952734
ಏಷ್ಯಾಕಪ್12651
ಯುಎಇ267190