Asianet Suvarna News Asianet Suvarna News

ಅಫ್ಘಾನಿಸ್ತಾನ ಸ್ಫೋಟಕ ಬ್ಯಾಟಿಂಗ್-ನಾಯಕ ಧೋನಿಗೆ ಎದುರಾಯ್ತು ಸಂಕಷ್ಟ!

ಎಂ.ಎಸ್ ಧೋನಿ ನಾಯಕನಾಗಿ ಕಮ್‌ಬ್ಯಾಕ್ ಮಾಡಿದ ಪಂದ್ಯದಲ್ಲೇ ಸಂಕಷ್ಟ ಎದುರಾಗಿದೆ. ಅಫ್ಘಾನಿಸ್ತಾನ ಸ್ಫೋಟಕ ಬ್ಯಾಟಿಂಗ್ ನಿಯಂತ್ರಿಸಲು ಧೋನಿ ತಮ್ಮ ಮಾಸ್ಟರ್ ಪ್ಲಾನ್ ಮೊರೆ ಹೋಗಿದ್ದಾರೆ.
 

Asia Cup 2018 Mohammad Shahzad slams quick fifty against India
Author
Bengaluru, First Published Sep 25, 2018, 6:06 PM IST
  • Facebook
  • Twitter
  • Whatsapp

ದುಬೈ(ಸೆ.25): ಅಫ್ಘಾನಿಸ್ತಾನ ವಿರುದ್ದದ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದಲ್ಲಿ ಮತ್ತೆ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡಿರು ಎಂ.ಎಸ್ ಧೋನಿಗೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ  ಅಫ್ಘಾನಿಸ್ತಾನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆರಂಭಿಕ ಮೊಹಮ್ಮದ್ ಶೆಹಝಾದ್ 4 ಸಿಕ್ಸರ್ ಹಾಗೂ 7 ಬೌಂಡರ್ ನೆರವಿನಿಂದ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ.

ಮತ್ತೊರ್ವ ಆರಂಭಿಕ ಜಾವೆದ್ ಅಹಮದಿ 5 ರನ್ ಸಿಡಿಸಿ ಸ್ಟಂಪ್ ಔಟಾದರು. ಇನ್ನು ರಹಹಮತ್ ಶಾ 3 ರನ್‌ಗೆ ಆಟ ಮುಗಿಸಿದರು. ಆದರೆ ಶೆಹಝಾದ್ ಆರ್ಭಟಕ್ಕೆ ಬ್ರೇಕ್ ಬಿದ್ದಿಲ್ಲ. ನಾಯಕನಾಗಿ 200ನೇ ಪಂದ್ಯ ಮುನ್ನಡೆಸುತ್ತಿರುವ ಧೋನಿಗೆ ಅಫ್ಘಾನ್ ತಂಡವನ್ನ ಕಟ್ಟಿಹಾಕೋ ಒತ್ತಡ ಎದುರಾಗಿದೆ.

ಭಾರತದ ಯುವ ಬೌಲಿಂಗ್ ಪಡೆ ನಿರೀಕ್ಷಿತ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಅಫ್ಘಾನಿಸ್ತಾನ ಬೃಹತ್ ಮೊತ್ತದ ಸೂಚನೆ ನೀಡಿದೆ. ಸದ್ಯ ಅಫ್ಘಾನ್ 2 ವಿಕೆಟ್ ನಷ್ಟಕ್ಕೆ 81 ರನ್ ಸಿಡಿಸಿದೆ.
 

Follow Us:
Download App:
  • android
  • ios