ಪಾಕ್ ವಿರುದ್ಧ ರೋಹಿತ್ ಅರ್ಧಶತಕ-ಗೆಲುವಿನತ್ತ ಭಾರತ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Sep 2018, 8:26 PM IST
Asia cup 2018 India bowl out Pakistan for 162
Highlights

ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ, ಟೀಂ ಇಂಡಿಯಾ ದಾಳಿಗೆ ಆಲೌಟ್ ಆಗಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್. 

ದುಬೈ(ಸೆ.18): ಏಷ್ಯಾಕಪ್ ಟೂರ್ನಿಯ ಭಾರತ ವಿರುದ್ದದ ಪಂದ್ಯದಲ್ಲಿ ಪಾಕಿಸ್ತಾನ 43.1 ಓವರ್‌ಗಳಲ್ಲಿ 162 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆದ ಅಪಕೀರ್ತಿಗೆ ಪಾಕಿಸ್ತಾನ ಪಾತ್ರವಾಗಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಪಾಕಿಸ್ತಾನ ಆರಂಭದಲ್ಲೇಇಮಾಮ್ ಉಲ್ ಹಕ್ ಹಾಗೂ ಫಕರ್ ಜಮಾನ್ ವಿಕೆಟ್ ಕಳೆದುಕೊಂಡಿತು.  ಆದರೆ ಬಾಬರ್ ಅಜಮ್ ಹಾಗೂ ಶೋಯಿಬ್ ಮಲ್ಲಿಕ್ ಜೊತೆಯಾಟದಿಂದ ಪಾಕ್ ಚೇತರಿಸಿಕೊಂಡಿತು.

ಬಾಬರ್ ಅಜಮ್ 47 ರನ್ ಸಿಡಿಸಿ ಔಟಾದರೆ, ನಾಯಕ ಸರ್ಫಾರಜ್ ಖಾನ್ 6 ರನ್ ಗಳಿಸಿ ನಿರ್ಗಮಿಸಿದರು. ಆಸರೆಯಾಗಿದ್ದ ಶೋಯಿಬ್ ಮಲ್ಲಿಕ್ 43 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಆಸಿಫ್ ಆಲಿ 9 ರನ್ ಸಿಡಿಸಿ ಪೆವೆಲಿಯನ್ ಸೇರಿಕೊಂಡರು.

ಫಾಹೀಮ್ ಅಶ್ರಫ್ ಹಾಗೂ ಮೊಹಮ್ಮದ್ ಅಮೀರ್ ಅಲ್ಪ ಹೋರಾಟ ನೀಡಿದರು. ಅಶ್ರಫ್ 21 ರನ್ ಸಿಡಿಸಿದರೆ, ಅಮೀರ್ 18 ರನ್ ಕಾಣಿಕೆ ನೀಡಿದರು. ಆದರೆ ಭಾರತದ ಅದ್ಬುತ ಬೌಲಿಂಗ್ ಮೂಲಕ ಪಾಕಿಸ್ತಾನ 43.1 ಓವರ್‌ಗಳಲ್ಲಿ 162 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಭಾರತದ ಗೆಲುವಿಗೆ 163 ರನ್ ಟಾರ್ಗೆಟ್ ನೀಡಿದೆ. ಭಾರತದಪರ ಭುವನೇಶ್ವರ್ ಕುಮಾರ್ ಹಾಗೂ ಕೇದಾರ್ ಜಾಧವ್ ತಲಾ 3 ವಿಕೆಟ್ ಪಡೆದದರು. ಇನ್ನು ಜಸ್‌ಪ್ರೀತ್ ಬುಮ್ರಾ 2 ಹಾಗೂ ಕುಲ್ದೀಪ್ ಯಾದವ್ 1 ವಿಕೆಟ್ ಕಬಳಿಸಿದರು.

ಪಾಕಿಸ್ತಾನ ನೀಡಿದ 163 ರನ್ ಟಾರ್ಗೆಟ್ ಬೆನ್ನಟ್ಟುತ್ತಿರುವ ಟೀಂ ಇಂಡಿಯಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್  ಡೀಸೆಂಟ್ ಒಪನಿಂಗ್ ನೀಡಿದರು. ಈ ಜೋಡಿ 86 ರನ್ ಜೊತೆಯಾಟ ನೀಡಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ 52 ರನ್ ಸಿಡಿಸಿ ಔಟಾದರು. 

loader