ನನ್ನ ಹೊಸ ಅಸ್ತ್ರವನ್ನು ನ್ಯೂಜಿಲ್ಯಾಂಡ್ ಹಾಗೂ ಬಾಂಗ್ಲಾದೇಶ ನಡುವಿನ ಎರಡು ಅಭ್ಯಾಸದಲ್ಲೇ ಪ್ರಯೋಗ ಮಾಡುತ್ತೇನೆಂದು ಹೇಳಿದ್ದಾರೆ.
ಮುಂಬೈ(ಮೇ.25): ಮುಂದಿನ ತಿಂಗಳಿಂದ ಆರಂಭವಾಗಲಿರುವ 8 ರಾಷ್ಟ್ರಗಳ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಬಳಸುವುದಕ್ಕಾಗಿ ನನ್ನ ಬಳಿ ಹೊಸ ಅಸ್ತ್ರ ಸಿದ್ಧವಾಗಿವೆ ಎಂದು ಆರ್. ಅಶ್ವಿನ್ ಹೇಳಿದ್ದಾರೆ.
ಸುಮಾರು ಎರಡು ತಿಂಗಳುಗಳ ಬಳಿಕ ಭಾರತದ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಅಶ್ವಿನ್ ಆಡುವ ಅವಕಾಶ ಪಡೆದಿದ್ದಾರೆ.
ನನ್ನ ಹೊಸ ಅಸ್ತ್ರವನ್ನು ನ್ಯೂಜಿಲ್ಯಾಂಡ್ ಹಾಗೂ ಬಾಂಗ್ಲಾದೇಶ ನಡುವಿನ ಎರಡು ಅಭ್ಯಾಸದಲ್ಲೇ ಪ್ರಯೋಗ ಮಾಡುತ್ತೇನೆಂದು ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಸಿಯೇಟ್ ಟೈರ್ಸ್ ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅಶ್ವಿನ್ 'ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೋಳ್ಳುತ್ತಿರುವ ಎಲ್ಲಾ ತಂಡಗಳಿಗೂ ಈ ಟೂರ್ನಿ ಮಹತ್ವದ್ದಾಗಿದೆ. ಹೀಗಾಗಿ ಎಲ್ಲಾ ತಂಡಗಳ ಆಟಗಾರರು ಪ್ರಬಲ ಪೈಪೋಟಿ ನೀಡುವ ಉತ್ಸಾಹದಲ್ಲಿದ್ದಾರೆ. ಇತ್ತೀಚೇಗಷ್ಟೇ ಮುಕ್ತಾಯ ಕಂಡ ಐಪಿಎಲ್ ಟೂರ್ನಿಯಲ್ಲಿ ಭಾರತದ ಆಟಗಾರರಲ್ಲದೇ ಇತರೆ ದೇಶದ ಕ್ರಿಕೆಟಿಗರು ತಮ್ಮ ಕೌಶಲ್ಯತೆಯನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.
