ಯುಎಇ ಮಹಿಳಾ ಕ್ರಿಕೆಟ್ ತಂಡಕ್ಕೆ ಅಶ್ವಿನ್ ಕ್ಲಾಸ್..!

Ashwin mentors UAE women in their T20 WC journey
Highlights

ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು ಜುಲೈನಲ್ಲಿ ನೆದರ್‌'ಲೆಂಡ್'ನಲ್ಲಿ ನಡೆಯಲಿದ್ದು, ಇದಕ್ಕಾಗಿ ಯುಎಇ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ‘ಜೆನ್-ನೆಕ್ಸ್ಟ್ ಕಿಂಗ್ಸ್ ಕ್ರಿಕೆಟ್ ಕ್ಲಿನಿಕ್’ ಯೋಜನೆಯ ಭಾಗವಾಗಿರುವ ಅಶ್ವಿನ್ ದುಬೈನಲ್ಲಿ ಕೆಲ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ದುಬೈ(ಫೆ.23): ಭಾರತದ ಆಫ್‌ಸ್ಪಿನ್ನರ್ ಆರ್.ಅಶ್ವಿನ್, ಐಸಿಸಿ ಟಿ20 ವಿಶ್ವಕಪ್‌'ಗೆ ಅರ್ಹತೆ ಗಿಟ್ಟಿಸಲು ಅಭ್ಯಾಸ ನಡೆಸುತ್ತಿರುವ ಯುಎಇ ಮಹಿಳಾ ತಂಡಕ್ಕೆ ಮಾರ್ಗದರ್ಶನ ನೀಡಿದ್ದಾರೆ.

ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳು ಜುಲೈನಲ್ಲಿ ನೆದರ್‌'ಲೆಂಡ್'ನಲ್ಲಿ ನಡೆಯಲಿದ್ದು, ಇದಕ್ಕಾಗಿ ಯುಎಇ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ‘ಜೆನ್-ನೆಕ್ಸ್ಟ್ ಕಿಂಗ್ಸ್ ಕ್ರಿಕೆಟ್ ಕ್ಲಿನಿಕ್’ ಯೋಜನೆಯ ಭಾಗವಾಗಿರುವ ಅಶ್ವಿನ್ ದುಬೈನಲ್ಲಿ ಕೆಲ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ 2 ತಾಸಿಗೂ ಹೆಚ್ಚು ಕಾಲ ಯುಎಇ ಮಹಿಳಾ ಕ್ರಿಕೆಟ್ ತಂಡಕ್ಕೆ ತಾಂತ್ರಿಕ ಸಲಹೆಗಳ ಜತೆಗೆ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಅಶ್ವಿನ್ ವಿವರಿಸಿದ್ದಾರೆ.

loader