ಈ ವರ್ಷದಲ್ಲಿ 50 ವಿಕೆಟ್ ಪಡೆದಿರುವ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಆಶ್ವಿನ್ ಪಾತ್ರರಾಗಿದ್ದಾರೆ.
ವಿಶಾಖಪಟ್ಟಣ(ನ.20): ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪ್ರಮುಖ ಐದು ವಿಕೆಟ್ ಕಬಳಿಸಿರುವ ಅಶ್ವಿನ್ 2016ರಲ್ಲಿ 52 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಇದರೊಂದಿಗೆ ಈ ವರ್ಷದಲ್ಲಿ 50 ವಿಕೆಟ್ ಪಡೆದಿರುವ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶ್ರೀಲಂಕಾದ ರಂಗನ್ ಹೆರಾತ್ ಪ್ರಸಕ್ತ ವರ್ಷದಲ್ಲಿ 54 ವಿಕೆಟ್ ಪಡೆದುಕೊಂಡು ಮೊದಲನೇ ಸ್ಥಾನದಲ್ಲಿದ್ದಾರೆ.
ಒಟ್ಟು 22 ಬಾರಿ 5 ವಿಕೆಟ್ ಪಡೆದಿರುವ ಸಾಧನೆ ಮಾಡಿರುವ ಅಶ್ವಿನ್, ರಂಗಣ ಹೇರನ್ನ ಹಿಂದಿಕ್ಕಿ ಈ ವರ್ಷದ ಅತೀ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ.
