36 ವರ್ಷದ ನೆಹ್ರಾ ಪ್ರಸಕ್ತ ಟೂರ್ನಿಯಲ್ಲಿ ಸನ್'ರೈಸರ್ಸ್ ಪರ ಕೇವಲ 6 ಪಂದ್ಯಗಳನ್ನಾಡಿದ್ದು, 24.62ರ ಸರಾಸರಿಯಲ್ಲಿ ಏಳು ವಿಕೆಟ್'ಗಳನ್ನು ಕಬಳಿಸಿದ್ದಾರೆ.

ಬೆಂಗಳೂರು(ಮೇ.16): ಸನ್ ರೈಸರ್ಸ್ ಹೈದರಾಬಾದ್ ತಂಡದ ಅನುಭವಿ ಎಡಗೈ ವೇಗದ ಬೌಲರ್ ಆಶೀಶ್ ನೆಹ್ರಾ ಗಾಯದ ಸಮಸ್ಯೆಯಿಂದಾಗಿ 10ನೇ ಆವೃತ್ತಿಯ ಪ್ಲೇ-ಆಫ್ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನೆಹ್ರಾ ಮಂಡಿರಜ್ಜು ಗಾಯದ ಸಮಸ್ಯೆಗೆ ಒಳಗಾಗಿದ್ದು, ಅವರಿಗೆ ಐಪಿಎಲ್‌'ನ ಉಳಿದ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಹೈದರಾಬಾದ್ ತಂಡದ ಕೋಚ್ ಟಾಮ್ ಮೂಡಿ ಹೇಳಿದ್ದಾರೆ.

ಮೇ 6ರಂದು ನಡೆದಿದ್ದ ಪುಣೆ ಸೂಪರ್‌'ಜೈಂಟ್ ವಿರುದ್ಧದ ಲೀಗ್ ಪಂದ್ಯದ ವೇಳೆ ನೆಹ್ರಾ ಗಾಯದ ಸಮಸ್ಯೆಗೆ ತುತ್ತಾಗಿದ್ದರು. 36 ವರ್ಷದ ನೆಹ್ರಾ ಪ್ರಸಕ್ತ ಟೂರ್ನಿಯಲ್ಲಿ ಸನ್'ರೈಸರ್ಸ್ ಪರ ಕೇವಲ 6 ಪಂದ್ಯಗಳನ್ನಾಡಿದ್ದು, 24.62ರ ಸರಾಸರಿಯಲ್ಲಿ ಏಳು ವಿಕೆಟ್'ಗಳನ್ನು ಕಬಳಿಸಿದ್ದಾರೆ.