ಈಡನ್ ಗಾರ್ಡನ್'ನಲ್ಲಿ ಮಳೆಯ ಕಾರಣದಿಂದಾಗಿ ಪಂದ್ಯ ತಡವಾಗಿ ಆರಂಭವಾಗಲಿದೆ.
ಕೋಲ್ಕತಾ(ನ.16): ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಘೋಷಿಸಿದ್ದ ಆಶಿಶ್ ನೆಹ್ರಾ, ಇಂದಿನಿಂದ ವೀಕ್ಷಕ ವಿವರಣೆಗಾರರಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಭಾರತ- ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್'ನಲ್ಲಿ ಮೊದಲ ಬಾರಿ ನೆಹ್ರಾ ಮೈಕ್ ಹಿಡಿದಿದ್ದಾರೆ. ಈ ವೇಳೆ ನೆಹ್ರಾಗೆ, ವೀರೇಂದ್ರ ಸೆಹ್ವಾಗ್ ಸಾಥ್ ನೀಡಿದ್ದಾರೆ. ಟ್ವಿಟರ್'ನಲ್ಲಿ ಸೆಹ್ವಾಗ್, ನೆಹ್ರಾಗೆ ಸ್ವಾಗತ ಕೋರಿದ್ದಾರೆ.
ನ.1ರಂದು ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ನಂತರ ನೆಹ್ರಾ ಕ್ರಿಕೆಟ್'ನಿಂದ ನಿವೃತ್ತಿ ಪಡೆದಿದ್ದರು
ಈಡನ್ ಗಾರ್ಡನ್'ನಲ್ಲಿ ಮಳೆಯ ಕಾರಣದಿಂದಾಗಿ ಪಂದ್ಯ ತಡವಾಗಿ ಆರಂಭವಾಗಲಿದೆ.
