ಲಂಡನ್(ಸೆ.11): ಇಂಗ್ಲೆಂಡ್ ನೆಲದಲ್ಲಿ ಆ್ಯಷಸ್ ಸರಣಿ ಗೆದ್ದು ಇತಿಹಾಸ ರಚಿಸಲು ತುದಿಗಾಲಲ್ಲಿ ನಿಂತಿರುವ ಆಸ್ಟ್ರೇಲಿಯಾ ಇದೀಗ 5ನೇ ಹಾಗೂ ಅಂತಿಮ ಪಂದ್ಯಕ್ಕೆ ಸಜ್ಜಾಗಿದೆ.  2-1 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಆಸ್ಟ್ರೇಲಿಯಾ ಅಂತಿಮ ಪಂದ್ಯದಲ್ಲಿ ಮೇಲುಗೈ ಸಾಧಿಸಿ ಸರಣಿ ಕೈವಶ ಮಾಡೋ ಲೆಕ್ಕಾಚಾರದಲ್ಲಿದೆ. ಕೆನ್ನಿಂಗ್ಟನ್ ಓವಲ್ ಪಂದ್ಯಕ್ಕೆ ಆಸ್ಟ್ರೇಲಿಯಾ 12 ಸದಸ್ಯರ ತಂಡ ಪ್ರಕಟಿಸಿದೆ.

ಇದನ್ನೂ ಓದಿ: ಆ್ಯಷಸ್ ಟೆಸ್ಟ್: 5ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಪ್ರಕಟ!

ಅಂತಿಮ ಪಂದ್ಯಕ್ಕೆ ಟ್ರಾವಿಸ್ ಹೆಡ್ ಬದಲು ಮಿಚೆಲ್ ಮಾರ್ಶ್‌ಗೆ ಸ್ಥಾನ ನೀಡಲಾಗಿದೆ. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಂತಿಮ ಪಂದ್ಯದಲ್ಲಿ ಬೌಲರ್‌ಗಳ ಮೇಲೆ ಯಾವುದೇ ಒತ್ತಡ ಬೀಳದಂತೆ ನೋಡಿಕೊಳ್ಳಲಾಗುವುದು. ಇದಕ್ಕಾಗಿ ಮಿಚೆಲ್ ಮಾರ್ಶ್‌ಗೆ ಸ್ಥಾನ ನೀಡಲಾಗಿದೆ. ಆಲ್ರೌಂಡರ್ ಮಾರ್ಶ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ನೆರವಾಗಲಿದ್ದಾರೆ ಎಂದು ನಾಯಕ ಟಿಮ್ ಪೈನೆ ಹೇಳಿದ್ದಾರೆ.

ಆಸ್ಟ್ರೇಲಿಯಾ  ತಂಡ:
ಟಿಮ್ ಪೈನೆ(ನಾಯಕ), ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬ್ಸ್‌ಚಾಗ್ನೆ, ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಶ್, ಮ್ಯಾಥ್ಯೂ ವೇಡ್, ಪ್ಯಾಟ್ ಕಮಿನ್ಸ್, ಪೀಟರ್ ಸಿಡಲ್, ನಥನ್ ಲಿಯೊನ್, ಜೋಶ್ ಹೇಜಲ್‌ವುಡ್