ಮ್ಯಾಂಚೆಸ್ಟರ್‌(ಸೆ.04): ಆಸ್ಪ್ರೇ​ಲಿ​ಯಾ ಹಾಗೂ ಇಂಗ್ಲೆಂಡ್‌ ನಡು​ವಿನ ಆ್ಯಷಸ್‌ ಸರಣಿಯ 4ನೇ ಟೆಸ್ಟ್‌, ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಮೈದಾನದಲ್ಲಿ ಬುಧವಾರದಿಂದ ಆರಂಭ​ಗೊ​ಳ್ಳ​ಲಿದೆ. 

ಆ್ಯಷಸ್ ಕದನ: ಸ್ಟೋಕ್ಸ್ ಕೆಚ್ಚೆದೆಯ ಶತಕಕ್ಕೆ ಒಲಿದ ವಿಜಯಲಕ್ಷ್ಮಿ

ಇಂಗ್ಲೆಂಡ್‌ನಲ್ಲಿ 18 ವರ್ಷಗಳ ಬಳಿಕ ಆ್ಯಷಸ್‌ ಟೆಸ್ಟ್‌ ಸರಣಿ ಗೆಲ್ಲುವ ಗುರಿ ಹೊಂದಿರುವ ಆಸ್ಪ್ರೇಲಿಯಾಕ್ಕೆ ಸ್ಟೀವ್‌ ಸ್ಮಿತ್‌ ಸೇವೆ ಲಭ್ಯ​ವಾ​ಗ​ಲಿದೆ. ಗಾಯದ ಸಮ​ಸ್ಯೆಯಿಂದಾಗಿ ಸ್ಮಿತ್‌ 3ನೇ ಪಂದ್ಯ​ದಿಂದ ಹೊರ​ಗು​ಳಿ​ದಿ​ದ್ದರು. ಇನ್ನು ಉಸ್ಮಾನ್ ಖವಾಜ ಅವರನ್ನು ಕೈಬಿಡಲಾಗಿದೆ. ವೇಗಿ ಮಿಚೆಲ್ ಸ್ಟಾರ್ಕ್ ತಂಡ ಕೂಡಿಕೊಂಡಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ಕ್ರಿಸ್ ವೋಕ್ಸ್ ಬದಲಿಗೆ ಕ್ರೇಗ್ ಓವರ್‌ಟನ್ ಸ್ಥಾನ ಪಡೆದಿದ್ದಾರೆ. 

ಡೇನಿಸ್ ಲಿಲ್ಲಿ ದಾಖಲೆ ಅಳಿಸಿ ಹಾಕಿದ ನೇಥನ್ ಲಯನ್..!

ಮೊದಲ ಟೆಸ್ಟ್‌ನಲ್ಲಿ ಆಸ್ಪ್ರೇ​ಲಿಯಾ ಜಯ​ಗ​ಳಿ​ಸಿತ್ತು. 2ನೇ ಪಂದ್ಯ ಡ್ರಾಗೊಂಡ ಬಳಿಕ, 3ನೇ ಪಂದ್ಯ​ದಲ್ಲಿ ಬೆನ್‌ ಸ್ಟೋಕ್ಸ್‌ ಹೋರಾ​ಟದ ನೆರ​ವಿ​ನಿಂದ ಇಂಗ್ಲೆಂಡ್‌ 1 ವಿಕೆಟ್‌ ರೋಚಕ ಗೆಲು​ವು ಸಾಧಿ​ಸಿತ್ತು. 5 ಪಂದ್ಯ​ಗಳ ಸರಣಿ 1-1ರಲ್ಲಿ ಸಮಗೊಂಡಿದ್ದು, ಈ ಪಂದ್ಯ ಭಾರೀ ಕುತೂ​ಹಲ ಕೆರ​ಳಿ​ಸಿದೆ.

ಪಂದ್ಯ ಆರಂಭ: ಮಧ್ಯಾಹ್ನ, 3.30