ಮುಗಿದ ವಿಶ್ವಕಪ್, ರಷ್ಯಾ ಕ್ರೀಡಾಂಗಣಗಳ ಭವಿಷ್ಯ ಅತಂತ್ರ..?
ವಿಶ್ವಕಪ್ ಟೂರ್ನಿ ಆರಂಭವಾಗುವುದಕ್ಕೂ ಮೊದಲೇ ಟೀವಿ ವಾಹಿನಿಯೊಂದಕ್ಕೆ ಪುಟಿನ್, ‘ಫುಟ್ಬಾಲ್ ಕ್ರೀಡಾಂಗಣವಿರುವ ಎಲ್ಲ ನನ್ನ ಸಿಬ್ಬಂದಿಗೆ ತಿಳಿಸುವುದೆನೆಂದರೆ, ಕ್ರೀಡಾಂಗಣಗಳಿಗೆ ಏನು ಸೌಲಭ್ಯ ಒದಗಿಸಿತ್ತಿರೋ ಗೊತ್ತಿಲ್ಲ. ಆದರೆ ಕ್ರೀಡಾಂಗಣಗಳು ಮಾತ್ರ ಜನರಿಂದ ತುಂಬಿರಬೇಕು’ ಎಂದು ಹೇಳಿದ್ದರು.
ಮಾಸ್ಕೋ[ಜು.17]: ಫುಟ್ಬಾಲ್ ವಿಶ್ವಕಪ್ ಟೂರ್ನಿಗಾಗಿ ಪುನಶ್ಚೇತನ ಹಾಗೂ ಹೊಸದಾಗಿ ನಿರ್ಮಿಸಲಾಗಿದ್ದ 12 ಕ್ರೀಡಾಂಗಣಗಳ ಭವಿಷ್ಯ ಅತಂತ್ರವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇಂತಹ ಸಂದರ್ಭ ಎದುರಾಗಬಹುದು ಎಂಬುದನ್ನು ಮೊದಲೇ ಅರಿತಿದ್ದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಕ್ರೀಡಾಂಗಣಗಳ ಸದ್ಬಳಕೆಗೆ ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರೆ.
ವಿಶ್ವಕಪ್ ಟೂರ್ನಿ ಆರಂಭವಾಗುವುದಕ್ಕೂ ಮೊದಲೇ ಟೀವಿ ವಾಹಿನಿಯೊಂದಕ್ಕೆ ಪುಟಿನ್, ‘ಫುಟ್ಬಾಲ್ ಕ್ರೀಡಾಂಗಣವಿರುವ ಎಲ್ಲ ನನ್ನ ಸಿಬ್ಬಂದಿಗೆ ತಿಳಿಸುವುದೆನೆಂದರೆ, ಕ್ರೀಡಾಂಗಣಗಳಿಗೆ ಏನು ಸೌಲಭ್ಯ ಒದಗಿಸಿತ್ತಿರೋ ಗೊತ್ತಿಲ್ಲ. ಆದರೆ ಕ್ರೀಡಾಂಗಣಗಳು ಮಾತ್ರ ಜನರಿಂದ ತುಂಬಿರಬೇಕು’ ಎಂದು ಹೇಳಿದ್ದರು. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿರುವ ಲುಜ್ನಿಕಿ ಹಾಗೂ ಸ್ಪಾರ್ಟಕ್ ಕ್ರೀಡಾಂಗಳ ಭವಿಷ್ಯಕ್ಕೆನೂ ತೊಂದರೆಯಿಲ್ಲ. ಆದರೆ ನಗರದಿಂದ ದೂರದಲ್ಲಿರುವ ನಿಜ್ನಿನೊವೊಗ್ರೋಡ್ ಮತ್ತು ಚಿಕ್ಕ ನಗರವಾಗಿರುವ ಸರನ್‌ಸ್ಕ್ ಮಾರ್ಡೋವಿಯಾ ಕ್ರೀಡಾಂಗಣಗಳ ಭವಿಷ್ಯ ಅತಂತ್ರವಾಗುವ ಸ್ಥಿತಿ ತಲೆದೋರಿದೆ. ವಿಶ್ವಕಪ್ ಟೂರ್ನಿಗಾಗಿ ರಷ್ಯಾ ಒಟ್ಟು 12 ಕ್ರೀಡಾಂಗಣಗಳ ಪುನಶ್ಚೇತನಕ್ಕಾಗಿ ರಷ್ಯಾ ₹27.42 ಸಾವಿರ ಕೊಟಿ ಹಣ ಖರ್ಚು ಮಾಡಿತ್ತು. ಎಲ್ಲ ಕ್ರೀಡಾಂಗಣಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಚಿಂತನೆ ನಡೆದಿದೆ.
ಸ್ಥಳೀಯ ಫುಟ್ಬಾಲ್ ತಂಡಗಳಿಗೆ ಸಹಾಯವಾಗಲು ಫುಟ್ಬಾಲ್ ತಂಡಗಳ ಅಭಿವೃದ್ಧಿಗೆ ₹137 ಕೋಟಿ ನೆರವು ನೀಡಲು ಮುಂದಾಗಿದೆ. ಜತೆಗೆ ಫುಟ್ಬಾಲ್ ಅಭಿವೃದ್ಧಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೂ ಹಣ ಬಳಸಲಾಗುವುದು’ ಎಂದು ರಷ್ಯಾ ಸರ್ಕಾರ ತಿಳಿಸಿದೆ. ಈ ಸಂಬಂಧ ಸಮರದ ಕ್ರೀಡಾ ಸಚಿವ ಡಿಮಿಟ್ರಿ ಶ್ಲೈಕ್ತಿನ್, ‘ನಾವು ನಮ್ಮ ಕ್ರೀಡಾಂಗಣಗಳನ್ನು ವಾಣಿಜ್ಯವಾಗಿ ಬಳಸಿಕೊಳ್ಳಲು ಸಾಧ್ಯವಾಗುವ ರೀತಿಯಲ್ಲಿ
ನಿರ್ಮಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.