ಏಕದಿನ ಕ್ರಿಕೆಟ್'ನಲ್ಲಿ 200 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ 14ನೇ ಆಟಗಾರ ಎನ್ನುವ ಖ್ಯಾತಿಗೆ ಕೊಹ್ಲಿ ಭಾಜನರಾಗಲಿದ್ದಾರೆ.

ಮುಂಬೈ(ಅ.22): ಪ್ರತಿ ಪಂದ್ಯವನ್ನು ಗೆಲ್ಲಬೇಕು ಎನ್ನುವ ಗುರಿ ಬೆನ್ನತ್ತುವ ಛಲಗಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂದು ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯುವುದರೊಂದಿಗೆ 200ನೇ ಏಕದಿನ ಪಂದ್ಯವನ್ನಾಡಲಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್'ನಲ್ಲಿ 200 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ 14ನೇ ಆಟಗಾರ ಎನ್ನುವ ಖ್ಯಾತಿಗೆ ಕೊಹ್ಲಿ ಭಾಜನರಾಗಲಿದ್ದಾರೆ. 200ನೇ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸುವ ಮೂಲಕ ಸ್ಮರಣೀಯವಾಗಿಸಿಕೊಳ್ಳುತ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.

ಇಲ್ಲಿಯವರೆಗೆ 199 ಒನ್‌'ಡೇ ಮ್ಯಾಚ್‌'ಗಳಿಂದ ಕೊಹ್ಲಿ 55.13ರ ಸರಾಸರಿಯಲ್ಲಿ 8767 ರನ್ ಕಲೆಹಾಕಿದ್ದು, 30 ಶತಕ, 45 ಅರ್ಧಶತಕ ಗಳಿಸಿದ್ದಾರೆ. ಇತರೆ ಆಟಗಾರರಿಗೆ ಹೋಲಿಸಿದರೆ ರನ್ ಗಳಿಕೆ, ಬ್ಯಾಟಿಂಗ್ ಸರಾಸರಿ, ಶತಕಗಳ ಸಂಖ್ಯೆಯಲ್ಲಿ ಕೊಹ್ಲಿಯೇ ಮುನ್ನಡೆ ಕಾಯ್ದುಕೊಂಡಿದ್ದಾರೆ.

199 ಪಂದ್ಯಗಳಲ್ಲಿ ವಿವಿಧ ಕ್ರಿಕೆಟ್ ದಿಗ್ಗಜರ ಸಾಧನೆ ನಿಮ್ಮ ಮುಂದೆ...

Scroll to load tweet…