ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಭಾರತ ಅಂಡರ್ 19 ತಂಡಕ್ಕೆ ಆಯ್ಕೆಯಾದಾಗ ಟೀಕೆ ವ್ಯಕ್ತವಾಗಿತ್ತು. ಸಚಿನ್ ಪುತ್ರ ಅನ್ನೋ ಕಾರಣಕ್ಕೆ ಅರ್ಜುನ್‌ಗೆ ಅವಕಾಶ ನೀಡಲಾಗಿದೆ ಅನ್ನೋ ಮಾತು ಕೇಳಿಬಂದಿತ್ತು. ಇದೀಗ ಟೀಕೆಗಳಿಗೆ ಅರ್ಜುನ್ ತೆಂಡೂಲ್ಕರ್ ಉತ್ತರಿಸಿದ್ದಾರೆ.
ಕೊಲಂಬೋ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್, ಭಾರತ ಅಂಡರ್-19 ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮಂಗಳವಾರ ಇಲ್ಲಿ ಆರಂಭಗೊಂಡ ಶ್ರೀಲಂಕಾ ವಿರುದ್ಧದ 4 ದಿನಗಳ ಟೆಸ್ಟ್ ಪಂದ್ಯದಲ್ಲಿ ಅರ್ಜುನ್ ಆಕರ್ಷಕ ಬೌಲಿಂಗ್ ಪ್ರದರ್ಶನ ತೋರಿದರು.
ಮೊದಲ ಇನ್ನಿಂಗ್ಸ್‌ನಲ್ಲಿ ಲಂಕಾದ ಕಮಿಲ್ ಮಿಶಾರಾರನ್ನು ತಮ್ಮ ಸ್ಪೆಲ್‌ನ 12ನೇ ಎಸೆತದಲ್ಲೇ ಎಲ್‌ಬಿ ಬಲೆಗೆ ಕೆಡವಿದ ಅರ್ಜುನ್, ಭಾರತ ಕಿರಿಯರ ತಂಡದ ಪರ ಚೊಚ್ಚಲ ವಿಕೆಟ್ ಕಬಳಿಸಿದ ಸಂಭ್ರಮ ಅಚರಿಸಿದರು.
ಅರ್ಜುನ್‌ಗೆ ಭಾರತ ಅಂಡರ್-19 ತಂಡದಲ್ಲಿ ಸ್ಥಾನ ನೀಡಿದ್ದಕ್ಕಾಗಿ ಕೆಲವರು ಟೀಕೆ ಮಾಡಿದ್ದರು. ಇದೀಗ ಅರ್ಜುನ್ ತೆಂಡೂಲ್ಕರ್ ವಿಕೆಟ್ ಕಬಳಿಸೋ ಮೂಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.
