ಕಳಪೆ ಫಾರ್ಮ್ ಎದುರಿಸುತ್ತಿದ್ದ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಇದೀಗ 5 ವಿಕೆಟ್ ಕಬಳಿಸೋ ಮೂಲಕ ಮಿಂಚಿದ್ದಾರೆ. ಸಚಿನ್ ಪುತ್ರನ ಪರ್ಫಾಮೆನ್ಸ್ ಹೇಗಿತ್ತು? ಇಲ್ಲಿದೆ ವಿವರ.
ನವದೆಹಲಿ(ನ.22): ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್, ಇಲ್ಲಿ ನಡೆದ ಅಂಡರ್-19 ಕೂಚ್ ಬಿಹಾರ್ ಟ್ರೋಫಿ ಟೂರ್ನಿಯಲ್ಲಿ 5
ವಿಕೆಟ್ ಕಿತ್ತು ಗಮನ ಸೆಳೆದಿದ್ದಾರೆ. ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾ ನದಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನದಾಟದಲ್ಲಿ ಮುಂಬೈ ಪರ ಆಡುತ್ತಿರುವ
ಅರ್ಜುನ್(5-98), ಬುಧವಾರ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ತಮ್ಮ ಕೈಚಳಕ ತೋರಿದ್ದಾರೆ.
;
ಅರ್ಜುನ್, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 3 ವಿಕೆಟ್ ಪಡೆದಿದ್ದರು. ಮುಂಬೈ ಮೊದಲ ಇನ್ನಿಂಗ್ಸ್‌ನಲ್ಲಿ 453ಕ್ಕೆ ಆಲೌಟ್ ಆಗಿತ್ತು. ಬುಧವಾರ 3ನೇ ದಿನ ಇನಿಂಗ್ಸ್
ಆರಂಭಿಸಿರುವ ದೆಹಲಿ 9 ವಿಕೆಟ್‌ಗೆ 298 ರನ್ ಗಳಿಸಿದೆ.
