ಐಪಿಎಲ್ ಬೆಟ್ಟಿಂಗ್: ತಪ್ಪೊಪ್ಪಿಕೊಂಡ ಅರ್ಬಾಜ್..!

First Published 2, Jun 2018, 1:52 PM IST
Arbaaz Khan admits his role in IPL betting
Highlights

ಐಪಿಎಲ್ ಬೆಟ್ಟಿಂಗ್ ಗೆ  ಸಂಬಂಧಿಸಿದಂತೆ ಬಾಲಿವುಡ್ ನಟ, ನಿರ್ಮಾಪಕ  ಅರ್ಬಾಜ್ ಖಾನ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಕಳೆದ 6 ವರ್ಷಗಳಿಂದ  ತಾವು ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವುದಾಗಿ ಅರ್ಬಾಜ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ಮುಂಬೈ(ಜೂ.2): ಐಪಿಎಲ್ ಬೆಟ್ಟಿಂಗ್ ಗೆ  ಸಂಬಂಧಿಸಿದಂತೆ ಬಾಲಿವುಡ್ ನಟ, ನಿರ್ಮಾಪಕ  ಅರ್ಬಾಜ್ ಖಾನ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಕಳೆದ 6 ವರ್ಷಗಳಿಂದ  ತಾವು ಬೆಟ್ಟಿಂಗ್ ನಲ್ಲಿ ಭಾಗಿಯಾಗಿರುವುದಾಗಿ ಅರ್ಬಾಜ್ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ಥಾಣೆಯ ಪೊಲೀಸ್ ಠಾಣೆಗೆ ಇಂದು ವಿಚಾರಣೆಗೆ ಹಾಜರಾದ ಅರ್ಬಾಜ್, ಕಳೆದ ೬ ವರ್ಷಗಳಿಂದ ಬೆಟ್ಟಿಂಗ್ ನಲ್ಲಿ ಭಾಗಿಯಾಗಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತನ ಜೊತೆ ಸಂಪರ್ಕ ಇತ್ತೆಂಬ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾರೆ.

"

ಈ 6 ವರ್ಷಗಳ ಅವಧಿಯಲ್ಲಿ ತಾವು 3 ಕೋಟಿ ರೂ. ಕಳೆದುಕೊಂಡಿರುವುದಾಗಿಯೂ ಅರ್ಬಾಜ್ ಹೇಳಿದ್ದಾರೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಬೆಸ್ತು ಬಿದ್ದ ಅವರು, ಕೆಲವೇ ಕ್ಷಣಗಳಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. 

ಇದಕ್ಕೂ ಮೊದಲು ಥಾಣೆ ಪೊಲೀಸರು ಅರ್ಬಾಜ್ ಖಾನ್ ಅವರ ಮೇಲೆ ಪ್ರಶ್ನೆಗಳ ಸುರಿಮಳೆಗೈದಿದ್ದರು. ಐಪಿಎಲ್ ನಲ್ಲಿ ಯಾವ ತಂಡದ ಪರ ಬೆಟ್ಟಿಂಗ್ ಮಾಡುತ್ತಿದ್ದರು?. ಎಷ್ಟು ಹಣ ಕಟ್ಟಲಾಗಿತ್ತು?. ಬುಕ್ಕಿ ಸೋನಮ್ ಜೊತೆಗಿನ ಸಂಪರ್ಕದ ಕುರಿತು ಪೊಲೀಸರು ಪ್ರಶ್ನೆ ಕೇಳಿ ಅರ್ಬಾಜ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.
 

loader