ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಅವಧಿ ಜೂನ್ 18ಕ್ಕೆ ಮುಕ್ತಾಯವಾಗಲಿದ್ದು,ಈ ಹಿನ್ನಲೆಯಲ್ಲಿ ಬಿಸಿಸಿಐ ಹೊಸ ಕೋಚ್ ಸ್ಥಾನಕ್ಕೆ ನೇಮಕ ಪ್ರಕ್ರಿಯೆ ಆರಂಭಿಸಿದೆ.
ಮುಂಬೈ(ಮೇ.25): ಭಾರತೀಯ ಕ್ರಿಕೆಟ್ ನಿಯತ್ರಣ ಮಂಡಳಿ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ'ಗಳನ್ನು ಆಹ್ವಾನಿಸಿದೆ.
ಪ್ರಸ್ತುತ ಭಾರತ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಅವಧಿ ಜೂನ್ 18ಕ್ಕೆ ಮುಕ್ತಾಯವಾಗಲಿದ್ದು,ಈ ಹಿನ್ನಲೆಯಲ್ಲಿ ಬಿಸಿಸಿಐ ಹೊಸ ಕೋಚ್ ಸ್ಥಾನಕ್ಕೆ ನೇಮಕ ಪ್ರಕ್ರಿಯೆ ಆರಂಭಿಸಿದೆ. ಅನಿಲ್ ಕುಂಬ್ಳೆ ಅವರನ್ನು ಬಿಸಿಸಿಐ ಮುಖ್ಯ ಕೋಚ್ ಆಗಿ ಒಂದು ವರ್ಷದ ಅವಧಿಯವರೆಗೆ ಮಾತ್ರ ನೇಮಿಸಿಕೊಂಡಿತ್ತು. ಕುಂಬ್ಳೆ ಅವರ ಕೆಲವು ನೇರ ನುಡಿಗಳಿಗೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿತ್ತು. ಇದೇ ಕಾರಣಕ್ಕೆ ಅವರ ಅವಧಿಯನ್ನು ಮುಂದುವರಿಸದೆ ಒಂದು ವರ್ಷಕ್ಕೆ ಮಾತ್ರ ಸೀಮಿತಗೊಳಿಸಿದೆ.
ಕೋಚ್ ಹುದ್ದೆಗೆ ಆಸಕ್ತಿಯುಳ್ಳವರು ತಮ್ಮ ಅರ್ಜಿಯನ್ನು ಮೇ. 31, 2017 ರೊಳಗೆ coachappointment@bcci.tv ಗೆ ಮೇಲ್ ಮಾಡಬೇಕೆಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಹಲವು ಗೆಲುವುಗಳು ತಂದು ಕೋಟ್ಟಿದ್ದ ಕುಂಬ್ಳೆ
ಆಕರ್ಷಕ ವ್ಯಕ್ತಿತ್ವ ಹಾಗೂ ನೇರ ನಡೆಯುಳ್ಳ ಕುಂಬ್ಳೆ ಒಂದು ವರ್ಷದ ಹಿಂದೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು. ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಇವರು ಭಾರತ ಹಲವು ಸರಣಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. ಆಸ್ಟ್ರೇಲಿಯಾ,ನ್ಯೂಜಿಲ್ಯಾಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾ ದೇಶಗಳ ನೆಲದಲ್ಲಿ ಟೆಸ್ಟ್, ಏಕ'ದಿನ ಹಾಗೂ ಟಿ20ಯಲ್ಲಿ ಭಾರತ ಸರಣಿ ಜಯಿಸಲು ಅನಿಲ್ ಕುಂಬ್ಳೆ ಪಾತ್ರ ಶ್ಲಾಘನೀಯವಾದುದು.
