ಲಂಡನ್[ಆ.08]: ಬಾಲಿವುಡ್ ತಾರೆ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಟೀಂ ಇಂಡಿಯಾ ಪರ ಕ್ರಿಕೆಟ್ ಆಡ್ತಾರ ಎನ್ನುವ ಚರ್ಚೆ ಆರಂಭವಾಗಿದೆ. ಇಂತಹ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನು ಓದಿ: ಲಂಡನ್ ಹೈಕಮಿಶನ್ ಭೇಟಿಯಾದ ಟೀಂ ಇಂಡಿಯಾ

ಬಿಸಿಸಿಐ ಮಾಡಿರುವ ಒಂದು ಟ್ವೀಟ್ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅರೇ ಇದೇನಿದು ಹೊಸ ವಿಷ್ಯಾ ಅಂತ ತಲೆಕೆಡಿಸಿಕೊಳ್ಳಬೇಡಿ. ಎರಡನೇ ಟೆಸ್ಟ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಪಡೆ ಲಂಡನ್’ನಲ್ಲಿರುವ ಭಾರತೀಯ ಹೈಕಮಿಶನ್ ಕಚೇರಿಗೆ ಭೇಟಿ ನೀಡಿದೆ. ಈ ವೇಳೆ ಅನುಷ್ಕಾ ಶರ್ಮಾ ಕೂಡ ಟೀಂ ಇಂಡಿಯಾ ತಂಡದೊಟ್ಟಿಗೆ ಫೋಟೊ ತೆಗಿಸಿಕೊಂಡಿದ್ದರು. ಈ ಚಿತ್ರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಅಕೌಂಟ್’ನಲ್ಲಿ ಟೀಂ ಇಂಡಿಯಾ ಸದಸ್ಯರು ಭಾರತೀಯ ಹೈಕಮಿಷನರ್ ಕಮಿಷನರ್ ಕಚೇರಿಯಲ್ಲಿ ಎಂದು ಟ್ವೀಟ್ ಮಾಡಿದೆ.

ಈ ಭಾವಚಿತ್ರ ನೋಡಿ ತಲೆಕೆಡಿಸಿಕೊಂಡ ಕೆಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು, ಅನುಷ್ಕಾ ಕೂಡಾ ಚಿತ್ರದಲ್ಲಿದ್ದಾರೆ.ಬಹುಶಃ ಮುಂದಿನ ಟೆಸ್ಟ್ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ಇರಬಹುದೇನೋ ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೋರ್ವ ಅಭಿಮಾನಿ ಅನುಷ್ಕಾ ಯಾವಾಗಿನಿಂದ ಭಾರತ ತಂಡದ ಪರ ಆಡಲು ಆರಂಭಿಸಿದರು ಎಂದು ಟ್ವೀಟ್ ಮಾಡಿದ್ದಾರೆ.